Select Your Language

Notifications

webdunia
webdunia
webdunia
webdunia

ಒಳ್ಳೆಯ ಹುಡುಗ ರಾಹುಲ್ ಯುಪಿಯಲ್ಲಿ ಹೆಚ್ಚೆಚ್ಚು ತಂಗಲಿ: ಅಖಿಲೇಶ್ ಟಾಂಗ್

Achche ladke
ಲಕ್ನೋ , ಗುರುವಾರ, 8 ಸೆಪ್ಟಂಬರ್ 2016 (18:10 IST)
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ. 
 
ರಾಹುಲ್ ಉತ್ತಮ ಹುಡುಗ, ಅವರು ಉತ್ತರ ಪ್ರದೇಶಕ್ಕೆ ಬರುತ್ತಲೇ ಇರಬೇಕು ಮತ್ತು ಹೆಚ್ಚೆಚ್ಚು ಇಲ್ಲಿ ತಂಗಬೇಕು ಎಂದು ದೇಶದಲ್ಲಿಯೇ ಅತಿ ಚಿಕ್ಕ ವಯಸ್ಸಿನ ಮುಖ್ಯಮಂತ್ರಿ ಎನ್ನಿಸಿಕೊಂಡಿರುವ ಉತ್ತರ ಪ್ರದೇಶದ ಸಿಎಂ ವ್ಯಂಗ್ಯವಾಡಿದ್ದಾರೆ. 
 
ರಾಹುಲ್ ಅವರು ಅತ್ಯಂತ ಒಳ್ಳೆಯ ಮನುಷ್ಯರಾಗಿದ್ದಾರೆ. ಅವರು ಹೆಚ್ಚೆಚ್ಚು ಉತ್ತರ ಪ್ರದೇಶದಲ್ಲಿ ಉಳಿದುಕೊಂಡರೆ ಅವರ ಜತೆ ನಾವು ಸ್ನೇಹ ಸಂಪಾದಿಸಬಹುದು. ಇಬ್ಬರು ಒಳ್ಳೆಯ ಮನುಷ್ಯರು ಒಂದಾದರೆ ಅದರಲ್ಲೇನೂ ತಪ್ಪಿದೆ ಎಂದು ಅವರು ಹೇಳಿದ್ದಾರೆ. 
 
ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ, ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ರೋಡ್ ಶೋ ನಡೆಸುವುದರಲ್ಲಿ ವ್ಯಸ್ತರಾಗಿದ್ದಾರೆ. ಇಂದು ರಾಹುಲ್ ರೈತ ಮಹಾಯಾತ್ರೆ ಅಂಗವಾಗಿ ಬಸ್ತಿಯಲ್ಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

50 ಟಿಎಂಸಿ ನೀರಿಗಾಗಿ ಮತ್ತೆ ಖ್ಯಾತೆ ತೆಗೆದ ತಮಿಳುನಾಡು