ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಖಂಡಿಸಿ ಈಗಾಗಲೇ ರಾಜ್ಯದಲ್ಲಿ ಪ್ರತಿಭಟನೆ ಸ್ಫೋಟಿಸಿರುವ ನಡುವೆ ತಮಿಳುನಾಡು ಮತ್ತೆ ನೀರಿಗಾಗಿ ಖ್ಯಾತೆ ತೆಗೆದಿದೆ. 50 ಟಿಎಂಸಿ ನೀರನ್ನು ಕೊಡುವಂತೆ ತಮಿಳುನಾಡು ಮುಖ್ಯಕಾರ್ಯದರ್ಶಿ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಪತ್ರ ಬರೆದಿದ್ದಾರೆ.
ಮುಂಚೆ ಬಾಕಿ ಉಳಿಸಿಕೊಂಡಿರುವ ನೀರನ್ನೂ ಕೂಡ ಹರಿಸಿ ಎಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ. ಈಗಾಗಲೇ ಕಾವೇರಿಯಿಂದ ಹರಿದಿರುವ ನೀರಿಗಾಗಿ ರಾಜ್ಯದಲ್ಲಿ ಹೋರಾಟದ ಕಿಚ್ಚು ಮೂಡಿದೆ. ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಆದರೆ ಅಷ್ಟರಲ್ಲೇ ಕರ್ನಾಟಕದ ಕಾವೇರಿಯಿಂದ ಮತ್ತಷ್ಟು ನೀರು ಹರಿಸುವಂತೆ ಆಗ್ರಹಿಸಲು ಮೇಲುಸ್ತುವಾರಿ ಸಮಿತಿಗೆ ತಮಿಳುನಾಡು ಮುಖ್ಯಕಾರ್ಯದರ್ಶಿ ಮೊರೆ ಹೋಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ