Webdunia - Bharat's app for daily news and videos

Install App

ವಿಧಾನಸಭೆಗೆ ಎಂಟ್ರಿ ಕೊಟ್ಟ AAP

Webdunia
ಶುಕ್ರವಾರ, 11 ಮಾರ್ಚ್ 2022 (09:05 IST)
ಪಣಜಿ : ಪಂಜಾಬ್ನಲ್ಲಿ ಸರ್ಕಾರ ರಚನೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷ  ದಕ್ಷಿಣ ಗೋವಾದ ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಗೋವಾ ವಿಧಾನಸಭೆಗೆ ಎಂಟ್ರಿ ಕೊಟ್ಟಿದೆ.
 
ಎಎಪಿ 2017ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಸ್ಪರ್ಧಿಸಿದಾಗ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ವೆಲಿಮ್ ಮತ್ತು ಬೆನೌಲಿಮ್ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. 

ಬೆನೌಲಿಮ್ನಲ್ಲಿ ಎಎಪಿ ಅಭ್ಯರ್ಥಿ ವೆಂಜಿ ವಿಗಾಸ್ ಅವರು ತೃಣಮೂಲ ಕಾಂಗ್ರೆಸ್ನ ಚರ್ಚಿಲ್ ಅಲೆಮಾವೊ ವಿರುದ್ಧ 1,271 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವೆಲಿಮ್ ಕ್ಷೇತ್ರದಲ್ಲಿ ಕ್ರೂಜ್ ಸಿಲ್ವಾ ಅವರು ಕಾಂಗ್ರೆಸ್ನ ಸವಿಯೋ ಡಿಸಿಲ್ವಾ ವಿರುದ್ಧ 169 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಇಬ್ಬರೂ ಅಭ್ಯರ್ಥಿಗಳಿಗೆ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪರಿಷ್ಕೃತ ಶಾಲಾ ಸಮಯವನ್ನು ಮುಂದುವರೆಸುವಂತೆ ಕೇರಳ ಸರ್ಕಾರ ಸೂಚನೆ

ಮೈಸೂರು ಮಹಾರಾಜರಿಗಿಂತಲೂ ಗ್ರೇಟ್ ನಮ್ಮಪ್ಪ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌

ವಿಮಾನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಾಣ, ದ.ಕನ್ನಡ, ಉಡುಪಿ ಅಧಿಕಾರಿಗಳ ಬದ್ಧತೆಗೆ ಪ್ರಿಯಾಂಕ್ ಖರ್ಗೆ ಮೆಚ್ಚುಗೆ

ಮುಂದಿನ ಸುದ್ದಿ
Show comments