Publish Date: Fri, 25 Feb 2022 (11:36 IST)
Updated Date: Fri, 25 Feb 2022 (08:41 IST)
ಬೆಂಗಳೂರು : ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿದ್ದ ಧರಣಿ ಸತತ ಐದನೇ ದಿನವೂ ಮುಂದುವರಿದಿದ್ದು, ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕಾಂಗ್ರೆಸ್ ಗದ್ದಲದ ನಡೆವೆಯೂ ಇವತ್ತು ಎರಡು ಬಿಲ್ಗಳನ್ನು ಮಂಡಿಸಿದ ಸರ್ಕಾರ ಆಂಗೀಕಾರವನ್ನು ಪಡೆದುಕೊಂಡಿದೆ. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ್ರು.
ಬಳಿಕ ವಿಧಾನಸಭೆ ಕಲಾಪವನ್ನು ಮಾರ್ಚ್ ನಾಲ್ಕಕ್ಕೆ ಮುಂದೂಡಲಾಯಿತು. ಸಿಎಂ ಮಾತನಾಡುವ ವೇಳೆಯೂ ಕಾಂಗ್ರೆಸ್ ಸದಸ್ಯರು ಅಡ್ಡಿಮಾಡಲು ಪ್ರಯತ್ನಿಸಿದ್ರು. ಓ… ಓ.. ದೇಶದ್ರೋಹಿ ಯಾರಪ್ಪಾ..? ಈಶ್ವರಪ್ಪ, ಈಶ್ವರಪ್ಪ ಎಂದು ಕೂಗುತ್ತಾ ಜೆ.ಪಿ.ನಡ್ಡಾ ಹೇಳಿಕೆಯ ಬಿತ್ತಿ ಪತ್ರ ತೋರಿಸಿ ಆಕ್ರೋಶ ಹೊರಹಾಕಿದರು.