Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಲೋಕಾಯುಕ್ತ ಸ್ಥಾಪನೆಗೆ ಒತ್ತಾಯಿಸಿದ ಎಎಪಿ ಭಾರ್ತಿ ವಶಕ್ಕೆ

ತಮಿಳುನಾಡಿನಲ್ಲಿ ಲೋಕಾಯುಕ್ತ ಸ್ಥಾಪನೆಗೆ ಒತ್ತಾಯಿಸಿದ ಎಎಪಿ ಭಾರ್ತಿ ವಶಕ್ಕೆ
ಚೆನ್ನೈ: , ಬುಧವಾರ, 7 ಸೆಪ್ಟಂಬರ್ 2016 (15:40 IST)
ತಮಿಳುನಾಡಿನಲ್ಲಿ ಲೋಕಾಯುಕ್ತ ಸ್ಥಾಪಿಸಬೇಕೆಂದು ಒತ್ತಾಯಿಸಿ ಯಾವುದೇ ಅನುಮತಿಯಿಲ್ಲದೇ ರ‌್ಯಾಲಿ ನಡೆಸಲು ಯತ್ನಿಸಿದ ಆಮ್ ಆದ್ಮಿ ಮುಖಂಡ ಸೋಮನಾಥ್ ಭಾರ್ತಿ ಜತೆಗೆ 27 ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಸ್ಥಾಪಿಸುವುದಾಗಿ ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಎಪಿ ಕಾರ್ಯಕರ್ತರು ಪ್ರಣಾಳಿಕೆಯ ಪ್ರತಿಗಳಿಗೆ ಅಗ್ನಿಸ್ಪರ್ಶ ಮಾಡಿದರು. 
 
ದೆಹಲಿ ವಿಧಾನಸಭೆಯ ಮಾಳವೀಯ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಭಾರ್ತಿ ಎಎಪಿಯ ರಾಜ್ಯಸಂಚಾಲಕ ವಾಸಿಗರನ್ ಅವರು ಕೈಗೊಂಡಿದ್ದ ಅನಿರ್ದಿಷ್ಟ ಉಪವಾಸ ನಿರಶನದಲ್ಲಿ ಭಾಗವಹಿಸಲು ಚೆನ್ನೈಗೆ ಆಗಮಿಸಿದ್ದರು. ಉಪವಾಸದಿಂದ ವಾಸಿಗರನ್ ಆರೋಗ್ಯ ಕ್ಷೀಣಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಿರುವನಂತಪುರದ ಬಿಜೆಪಿ ಕಚೇರಿಯಲ್ಲಿ ಕಚ್ಚಾ ಬಾಂಬ್ ಸ್ಫೋಟ