ಇಲ್ಲಿನ ಬಿಜೆಪಿ ಕಚೇರಿಗೆ ಕಚ್ಚಾ ಬಾಂಬ್ವೊಂದನ್ನು ಎಸೆಯಲಾಗಿದ್ದು, ಯಾವುದೇ ಸಾವು, ನೋವು ಉಂಟಾಗಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದರು. ಸುಮಾರು ಮಧ್ಯರಾತ್ರಿಯ ಸಮಯದಲ್ಲಿ ಕಚ್ಚಾ ಬಾಂಬ್ ಎಸೆದಿದ್ದರಿಂದ ಮುಖ್ಯದ್ವಾರದ ಗಾಜಿನ ಪೇನ್ಗಳು ಚೂರುಚೂರಾಗಿವೆ.
ಕಚ್ಚಾ ಬಾಂಬ್ ಎಸೆದಾಗ 3-4 ಬಿಜೆಪಿ ಕಾರ್ಯಕರ್ತರು ಕಚೇರಿಯ ಮೇಲಿನ ಮಹಡಿಯಲ್ಲಿದ್ದು, ಯಾರಿಗೂ ಗಾಯಗಳಾಗಿಲ್ಲ. ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್ ಬಿಜೆಪಿ ಕಚೇರಿಯಿಂದ ನಿರ್ಗಮಿಸಿದ 45 ನಿಮಿಷಗಳಲ್ಲೇ ಕಚ್ಚಾ ಬಾಂಬ್ ಸ್ಫೋಟಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಬಿಜೆಪಿ ಈ ಘಟನೆ ಕುರಿತು ಪ್ರತಿಕ್ರಿಯಿಸಲು ಬೆಳಿಗ್ಗೆ 10ಗಂಟೆಗೆ ಸಚಿವಾಲಯಕ್ಕೆ ಮೆರವಣಿಗೆ ಹೊರಡಲಿದೆ ಎಂದು ಮೂಲಗಳು ಹೇಳಿವೆ. ಪಕ್ಷದ ಹೊಸ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ.