Select Your Language

Notifications

webdunia
webdunia
webdunia
webdunia

ಮುಂದುವರಿದ ಆಪ್ ಶಾಸಕರ ಬಂಧನ ಸರದಿ: ಇದೀಗ ಆಪ್ ಶಾಸಕ ಅಮಾನುತುಲ್ಲಾಖಾನ್ ಪೊಲೀಸ್ ವಶಕ್ಕೆ

ಆಪ್ ಶಾಸಕ
ನವದೆಹಲಿ , ಭಾನುವಾರ, 24 ಜುಲೈ 2016 (13:23 IST)
ದಕ್ಷಿಣ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿರುವ ನಿವಾಸದಲ್ಲಿ ಯುವಕನೊಬ್ಬ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರು ನೀಡಿದ ಹಿನ್ನೆಲೆಯಲ್ಲಿ ಆಪ್ ಶಾಸಕ ಅಮಾನತುಲ್ಲಾ ಖಾನ್‌ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 
 
ಘಟನೆಗೆ ಸಂಬಂಧಿಸಿದಂತೆ ಆಪ್ ಶಾಸಕನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ಜುಲೈ 10 ರಂದು ವಿದ್ಯುತ್ ಕಡಿತ ಕುರಿತಂತೆ ಚರ್ಚಿಸಲು ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ದೂರವಾಣಿ ಕರೆ ಮಾಡಿ, ನಂತರ ಅವರ ನಿವಾಸಕ್ಕೆ ತೆರಳಿದ್ದೆ. ಆದರೆ, ಸಚಿವರು ಭೇಟಿಯಾಗಲಿಲ್ಲ. ಆದರೆ, ಮನೆಯಲ್ಲಿದ್ದ ಯುವಕನೊಬ್ಬ ನನಗೆ ವಿಷಯವನ್ನು ರಾಜಕೀಯಗೊಳಿಸಿದತೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.  
 
ನಂತರ ಮಹಿಳೆ, ಬೆದರಿಕೆಯೊಡ್ಡಿದ ಯುವಕನ ವಿರುದ್ಧ ಜಾಮಿಯಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯಾವ ಮಹಿಳೆ ನನ್ನ ಮನೆಗೆ ಬಂದಿದ್ದಳು ಎನ್ನುವುದು ನನಗೆ ತಿಳಿದಿಲ್ಲ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್ ಹೇಳಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮಿರದ ಹಗಲು ಗನಸು ಕಾಣುವುದು ಬಿಡಿ: ಷರೀಫ್‌ಗೆ ಸುಷ್ಮಾ ಸ್ವರಾಜ್ ಖಡಕ್ ಎಚ್ಚರಿಕೆ