ಕಾಶ್ಮಿರದ ಬಗೆಗಿರುವ ನಿಮ್ಮ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಿದ್ದಾರೆ.
ನಿಷೇಧಿತ ಉಗ್ರಗಾಮಿ ಸಂಘಟನೆಯ ಕಮಾಂಡರ್ ಅಗಿದ್ದ ಬುರ್ಹಾನ್ ವನಿಯ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹುತಾತ್ಮ ಎಂದು ಕರೆದಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಶ್ಮಿರವನ್ನು ಪಾಕಿಸ್ತಾನದ ಭಾಗವಾಗಿಸಬೇಕು ಎನ್ನುವ ಪಾಕಿಸ್ತಾನದ ಅಪಾಯಕಾರಿ ಕನಸು ಎಂದೆಂದಿಗೂ ನನಸಾಗುವುದಿಲ್ಲ ಎನ್ನುವುದನ್ನು ಪಾಕಿಸ್ತಾನ ಅರಿತುಕೊಳ್ಳಲಿ ಎಂದರು.
ಕಾಶ್ಮಿರ ಒಂದಿಲೊಂದು ದಿನ ಪಾಕಿಸ್ತಾನದ ಭಾಗವಾಗುವುದನ್ನು ನೋಡಲು ಕಾಯುತ್ತಿದ್ದೇವೆ ಎನ್ನುವ ಪಾಕ್ ಪ್ರಧಾನಿ ಷರೀಫ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ಜಮ್ಮು ಕಾಶ್ಮಿರದ ಸಂಪೂರ್ಣ ಭಾಗ ಭಾರತದ ಸ್ವರ್ಗವಾಗಿದೆ. ಸ್ವರ್ಗವನ್ನು ನರಕ ಮಾಡಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.
ಪಾಕಿಸ್ತಾನದ ಕೆಟ್ಟ ಹಣ, ಅಪಾಯಕಾರಿ ಭಯೋತ್ಪಾದಕರು ಮತ್ತು ಅಸ್ಥಿರ ಸರಕಾರದಿಂದ ಭಾರತವನ್ನು ಅಸ್ತವ್ಯಸ್ಥಗೊಳಿಸುವ ಹುನ್ನಾರ ನಡೆದಿದೆ. ಆದರೆ, ಪಾಕಿಸ್ತಾನ ಹಗಲು ಗನಸು ಕಾಣುವುದು ಬಿಟ್ಟರೆ ಸೂಕ್ತ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.