Select Your Language

Notifications

webdunia
webdunia
webdunia
webdunia

ಸೆಕ್ಸ್ ಟೇಪ್‌ನಲ್ಲಿ ಸಿಕ್ಕಿಬಿದ್ದ ಎಎಪಿ ಸಚಿವ ಸಂದೀಪ್ ಕುಮಾರ್ ವಜಾ

ಸೆಕ್ಸ್ ಟೇಪ್‌ನಲ್ಲಿ ಸಿಕ್ಕಿಬಿದ್ದ ಎಎಪಿ ಸಚಿವ ಸಂದೀಪ್ ಕುಮಾರ್ ವಜಾ
ನವದೆಹಲಿ: , ಗುರುವಾರ, 1 ಸೆಪ್ಟಂಬರ್ 2016 (09:31 IST)
ಬುಧವಾರ ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿಗೆ ಸಿಡಿಯೊಂದು ರವಾನೆಯಾಯಿತು. ಅರ್ಧಗಂಟೆಯ ಬಳಿಕ ಮುಖ್ಯಮಂತ್ರಿ ಟ್ವೀಟ್ ಮಾಡಿ ತಮ್ಮ ಸಚಿವಸಂಪುಟದ ಅತೀ ಕಿರಿಯ ಸಚಿವ ಸಂದೀಪ್ ಕುಮಾರ್ ಅವರನ್ನು ವಜಾ ಮಾಡುತ್ತಿರುವುದಾಗಿ ತಿಳಿಸಿದರು.

ಸಿಡಿಯಲ್ಲಿರುವ 9 ನಿಮಿಷಗಳ ವಿಡಿಯೊದಲ್ಲಿ 34 ವರ್ಷದ ಸಂದೀಪ್ ಕುಮಾರ್ ಇಬ್ಬರು ಮಹಿಳೆಯರ ಜತೆ ಆಕ್ಷೇಪಾರ್ಹ ಭಂಗಿಯಲ್ಲಿದ್ದರೆಂದು ಆಮ್ ಆದ್ಮಿ ನಾಯಕರು ಬಣ್ಣಿಸಿದ್ದಾರೆ. ಸಿಡಿಯ ಜತೆ 11 ಛಾಯಾಚಿತ್ರಗಳೂ ಇವೆ.
 
ಕೆಲವು ಟಿವಿ ಚಾನೆಲ್‌ಗಳಿಗೆ ಸಂಜೆ ಸಿಡಿಗಳು ಸೋರಿಕೆಯಾಗಿದ್ದು, ಮುಖ್ಯಮಂತ್ರಿ ಪ್ರತಿಕ್ರಿಯೆಗಾಗಿ ಅವರಿಗೆ ಪ್ರತಿಯೊಂದನ್ನು ಕಳಿಸಿದ್ದವು.  ಎಎಪಿ ಗೊಂದಲಕಾರಿ ಸ್ಥಿತಿಯಲ್ಲಿ ಸಿಲುಕಿತು. ತಡರಾತ್ರಿವರೆಗೆ ಮುಖ್ಯಮಂತ್ರಿಗಳ ಫ್ಲಾಗ್‌ಸ್ಟಾಫ್ ರಸ್ತೆ ಬಂಗ್ಲೆಯಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗೆ ಕುಮಾರ್ ಅವರಿಗೆ ಬದಲಿಯಾಗಿ ಯಾರನ್ನು ನೇಮಿಸಬೇಕೆಂಬ ಬಗ್ಗೆ ಕೂಡ ಚರ್ಚೆ ನಡೆಯಿತು.
 
ಇದಾದ ಕೂಡ ಡೆಪ್ಯೂಟಿ ಮನಿಷ್ ಸಿಸೋಡಿಯಾ ವರದಿಗಾರರಿಗೆ ತಿಳಿಸುತ್ತಾ, ದೆಹಲಿ ಸಿಎಂ ಸಂದೀಪ್ ಕುಮಾರ್ ಅವರನ್ನು ಒಳಗೊಂಡ ಆಕ್ಷೇಪಾರ್ಹ ಸಿಡಿಯನ್ನು ನೋಡಿ ಅರ್ಧಗಂಟೆಯೊಳಗೆ ಕ್ರಮ ಕೈಗೊಂಡು ಸಚಿವರನ್ನು ವಜಾ ಮಾಡಲಾಯಿತೆಂದು ತಿಳಿಸಿದರು. 
 
ಎಎಪಿ ಸಿದ್ಧಾಂತಗಳ ಪಕ್ಷ, ಭ್ರಷ್ಟಾಚಾರ, ಹಗರಣಗಳ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಲಂಚ ತೆಗೆದುಕೊಂಡಿದನ್ನು ಕಂಡ ಸಚಿವರನ್ನು ತಕ್ಷಣವೇ ವಜಾ ಮಾಡಲಾಗಿದೆ. ಯಾವುದೇ ಸದಸ್ಯರ ಸ್ಥಾನಮಾನ ಅಥವಾ ಹುದ್ದೆಯನ್ನು ಪರಿಗಣಿಸದೇ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ನುಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಧು, ಸಾಕ್ಷಿಗೆ ದೆಹಲಿ ಸರ್ಕಾರದಿಂದ ಸನ್ಮಾನ