Select Your Language

Notifications

webdunia
webdunia
webdunia
webdunia

ಯುಪಿಯಲ್ಲೂ ಖಾತೆ ತೆರೆದ ಆಮ್ ಆದ್ಮಿ ಪಾರ್ಟಿ: 39 ಸ್ಥಾನಗಳಲ್ಲಿ ಗೆಲುವು

ಯುಪಿಯಲ್ಲೂ ಖಾತೆ ತೆರೆದ ಆಮ್ ಆದ್ಮಿ ಪಾರ್ಟಿ: 39 ಸ್ಥಾನಗಳಲ್ಲಿ ಗೆಲುವು
ಲಕ್ನೋ , ಶನಿವಾರ, 2 ಡಿಸೆಂಬರ್ 2017 (16:09 IST)
ಉತ್ತರ ಪ್ರದೇಶ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆದು ಅಚ್ಚರಿ ಮೂಡಿಸಿದೆ.
ಘಟಾನುಘಟಿ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಹೀನಾಯವಾಗಿ ಸೋಲನುಭವಿಸಿದ್ದರೆ, ಆಪ್ ಪಕ್ಷ ಮೊದಲ ಪ್ರಯತ್ನದಲ್ಲಿಯೇ ಅಬ್ಬರದ ಸಾಧನೆ ಮಾಡಿದೆ ಎನ್ನಲಾಗುತ್ತಿದೆ.
 
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರು ಜಯಗಳಿಸಿದ್ದರೆ, 37 ಸದಸ್ಯರು ಜಯಭೇರಿ ಬಾರಿಸಿದ್ದಾರೆ. ಕೇವಲ ನಾಲ್ಕು ತಿಂಗಳ ಸಿದ್ದತೆಯಲ್ಲಿ 39 ಸೀಟು ಗೆದ್ದಿರುವುದು ಸಂತಸ ತಂದಿದೆ ಎಂದು ಆಪ್ ನಾಯಕರು ಹೇಳಿದ್ದಾರೆ.
 
ಉತ್ತರಪ್ರದೇಶದ ಆಮ್ ಆದ್ಮಿ ಪಕ್ಷದ ಉಸ್ತುವಾರಿಯಾಗಿರುವ ಸಂಜಯ್ ಸಿಂಗ್ ಮಾತನಾಡಿ, ಪಾಲಿಕೆ ಫಲಿತಾಂಶ ಧನಾತ್ಮಕವಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತಯಂತ್ರ ದೋಷ? ಸಹರಣ್‌ಪುರ್ ಅಭ್ಯರ್ಥಿಗೆ ಶೂನ್ಯ ಮತ, ನನ್ನ ಮತವೇ ಕಾಣೆ ಎಂದ ಅಭ್ಯರ್ಥಿ