Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ 4 ತಾಸಿಗೊಂದು ಅತ್ಯಾಚಾರ, ನಿತ್ಯ 21 ಕಾರ್ ಕಳವು

woman
ನವದೆಹಲಿ , ಶನಿವಾರ, 31 ಡಿಸೆಂಬರ್ 2016 (15:21 IST)
ದೆಹಲಿ ಪೊಲೀಸರು ಶುಕ್ರವಾರ ಪ್ರಸಕ್ತ ಸಾಲಿನಲ್ಲಿ ನಡೆದ ಅಪರಾಧಗಳ ವಾರ್ಷಿಕ ದತ್ತಾಂಶವನ್ನು ಬಿಡುಗಡೆಗೊಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಆದರೆ ವಾಹನ ಕಳವು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 4 ತಾಸಿಗೆ ಓರ್ವ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ಜತೆಗೆ ದಿನವೊಂದಕ್ಕೆ ಸರಾಸರಿ 21 ಕಾರ್‌ಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
 
2015ಕ್ಕೆ ಹೋಲಿಸಿದರೆ 2016ರಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬಂದಿದೆ. 2015ರಲ್ಲಿ 2,069 ರೇಪ್ ಕೇಸ್ ದಾಖಲಾಗಿದ್ದರೆ 2016ರಲ್ಲಿ ಅದರ ಸಂಖ್ಯೆ 2029. ಈ ಪೈಕಿ ಇತ್ಯರ್ಥಗೊಂಡಿರುವ ಪ್ರಕರಣಗಳು ಕೇವಲ 1,744.
 
ದರೋಡೆ ಪ್ರಕರಣಗಳಳಲ್ಲಿ ಕೂಡ ಪ್ರತಿಶತ 35.45ರಷ್ಟು ಇಳಿತವಾಗಿದೆ. 2015 ನವೆಂಬರ್ 8 ರಿಂದ ಡಿಸೆಂಬರ್ 9ರವರೆಗಿನ ಅವಧಿಯಲ್ಲಿ ಒಟ್ಟು 561 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ಕೇವಲ 315 ದರೋಡೆ ಪ್ರಕರಣಗಳು ದಾಖಲಾಗಿವೆ.
 
ಹತ್ಯೆ ಪ್ರಕರಣಗಳು ಸಹ ತಗ್ಗಿದ್ದು 2015ರಲ್ಲಿ 530 ಮತ್ತು 2016ರಲ್ಲಿ 490 ಕೊಲೆ ಪ್ರಕರಣಗಳು ದಾಖಲಾಗಿವೆ. 
 
ಆದರೆ ವಾಹನ ಕಳ್ಳತನ ಮಾತ್ರ ದಿನಗಳೆದಂತೆ ಚಿಂತಾಜನಕವಾಗಿ ಏರಿಕೆಯಾಗುತ್ತಿದೆ. 2015ರಲ್ಲಿ 36,137 ವಾಹನ ಕಳವಾಗಿದ್ದರೆ, 2016ರಲ್ಲಿ ಹೆಚ್ಚುವರಿಯಾಗಿ 5,250 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್‌ನಿಂದ ಹಣ ಪಡೆಯುವ ವಾರದ ಮಿತಿ ರದ್ದುಗೊಳಿಸಿ: ರಾಹುಲ್ ಗಾಂಧಿ