ಬ್ಯಾಂಕ್‌ಗಳಿಂದ ಹಣ ಹಿಂಪಡೆಯುವ ವಾರದ ಮಿತಿಯನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಯವರ ಮಾತಿನ ಮೇಲೆ ನಂಬಿಕೆಯಿಟ್ಟಿದ್ದರಿಂದ ಕಳೆದ 50 ದಿನಗಳಲ್ಲಿ ವಿನಾಶದ ಹಂತಕ್ಕೆ ತಲುಪಿದ್ದೇವೆ. ಹಣ ಪಡೆಯುವ ವಾರದ ಮಿತಿಯನ್ನು ರದ್ದುಗೊಳಿಸಲೇಬೇಕು ಎಂದು ಗುಡುಗಿದ್ದಾರೆ.
ನೋಟು ನಿಷೇಧದಿಂದಾಗಿ ಸಂಕಷ್ಟಕ್ಕೊಳಗಾದ ಜನತೆಗೆ ಪ್ರಧಾನಿ ಮೋದಿ ಪರಿಹಾರ ಘೋಷಿಸಬೇಕು. ಬಡತನದ ರೇಖೆಗಿಂತ ಕೆಳಗಿರುವವರಿಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ಧನ ನೀಡಬೇಕು ಎಂದರು.
ಆರ್ಥಿಕವಾಗಿ ತೀವ್ರ ತೊಂದರೆಗೊಳಗಾದ ವ್ಯಾಪಾರಸ್ಥರಿಗೆ ಆದಾಯ ಮತ್ತು ಮಾರಾಟ ತೆರಿಗೆ ಆದಾಯದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.