Select Your Language

Notifications

webdunia
webdunia
webdunia
webdunia

ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ?

ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ?
ನವದೆಹಲಿ , ಮಂಗಳವಾರ, 6 ಸೆಪ್ಟಂಬರ್ 2022 (14:35 IST)
ನವದೆಹಲಿ : ಬೋಯಿಂಗ್ 737 ವಿಮಾನದ ಕಾಕ್ಪಿಟ್ ಬಲಭಾಗದಲ್ಲಿ ‘ಶಿಳ್ಳೆ’ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಸ್ತಾರಾ ಏರ್ಲೈನ್ಸ್ನ ವಿಮಾನ ದೆಹಲಿಗೆ ಮರಳಿದೆ.

ಈ ಕುರಿತಂತೆ ವಿಮಾನದ ಪ್ರಾಥಮಿಕ ಭೂ ತಪಾಸಣೆ ವೇಳೆ ಯಾವುದೇ ರಚನಾತ್ಮಕ ನ್ಯೂನತೆ ಕಂಡುಬಂದಿಲ್ಲವಾದರೂ, ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ.

2022ರ ಸೆಪ್ಟೆಂಬರ್ 4ರಂದು ವಿಸ್ತಾರಾ ಬಿ737-800 ವಿಮಾನ ವಿಟಿ-ಟಿಜಿಬಿ ಯುಕೆ 951 (ದೆಹಲಿ-ಮುಂಬೈ) ವಿಮಾನ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಾಕ್ಪಿಟ್ನ ಬಲಭಾಗದಲ್ಲಿ ಶಿಳ್ಳೆ ಸದ್ದು ಕೇಳಿ ಬಂದಿದ್ದರಿಂದ ದೆಹಲಿಗೆ ಮರಳಿತು. 

ಹೀಗಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಯಿತು ಮತ್ತು ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆಗೊಳಿಸಲಾಯಿತು ಏರ್ಲೈನ್ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಪ್ರಕರಣಗಳು ಏರಿಕೆ! ಮತ್ತೆ ಲಾಕ್‌ಡೌನ್