ಕಾಡಿನಿಂದ ಜೇನು ಸಂಗ್ರಹಿಸಿ ವಾಪಾಸ್ಸಾಗುತ್ತಿದ್ದ ಬುಡಕಟ್ಟು ಯುವಕನ ಮೇಲೆ ಆನೆ ದಾಳಿ, ಸಾವು

Sampriya
ಸೋಮವಾರ, 14 ಏಪ್ರಿಲ್ 2025 (14:41 IST)
Photo Credit X
ಅತಿರಪ್ಪಿಳ್ಳಿ: ಇಲ್ಲಿನ ಸಮೀಪದ ಅರಣ್ಯದಲ್ಲಿ ಕಾಡಾನೆ ದಾಳಿಗೆ ಆದಿವಾಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಆದಿಚಿಲಿತೊಟ್ಟಿ ಗಿರಿಜನ ಬಡಾವಣೆಯ ನಿವಾಸಿ ತಂಬಾನ್ ಎಂಬವರ ಪುತ್ರ ಸೆಬಾಸ್ಟಿಯನ್ (20) ಎಂದು ಗುರುತಿಸಲಾಗಿದೆ.

ರಾತ್ರಿ 10 ಗಂಟೆ ಸುಮಾರಿಗೆ ಈ ದಾರುಣ ಘಟನೆ ನಡೆದಿದೆ. ಭಾನುವಾರ ರಾತ್ರಿ, ಸೆಬಾಸ್ಟಿಯನ್ ಮತ್ತು ಸ್ನೇಹಿತರ ಗುಂಪು ಜೇನು ಸಂಗ್ರಹಿಸಿ ಕಾಡಿನಿಂದ  ವಾಪಾಸ್ಸಾಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಸೆಬಾಸ್ಟಿಯನ್ ಗಂಭೀರವಾಗಿ ಗಾಯಗೊಂಡಿದ್ದ.

ಪೊಲೀಸ್ ವರದಿಗಳ ಪ್ರಕಾರ, ರಾತ್ರಿ ವೇಳೆ ಕಾಣಿಸಿಕೊಂಡ ಆನೆಯಿಂದ ತಪ್ಪಿಸಿಕೊಳ್ಳಲು ಮೂವರು ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಸೆಬಾಸ್ಟಿಯನ್ ಆನೆಯ ದಾಳಿಯಿಂದ ಸಾವನ್ನಪ್ಪಿದ್ದಾನೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಲಕುಡಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments