ಚಿಕ್ಕ ಸಹೋದರಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಸಹೋದರಿ

Webdunia
ಮಂಗಳವಾರ, 14 ನವೆಂಬರ್ 2023 (12:03 IST)
ಪೋಷಕರೇ ನನ್ನನ್ನು  ವೇಶ್ಯಾವಾಟಿಕೆ ದಂಧೆಯಲ್ಲಿ ಪಾಲ್ಗೊಳ್ಳಲು ಒತ್ತಡ ಹೇರಿದ್ದರು ಎಂದು ನೊಂದ ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಐಪಿಸಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದ್ದು , ಅನೈತಿಕ ಸಾಗಾಣಿಕೆ ಕಾಯಿದೆ ಮತ್ತು ಮಕ್ಕಳ ರಕ್ಷಣೆಯ ಲೈಂಗಿಕ ಅಪರಾಧಗಳ (POCSO) ಕಾಯಿದೆಯಡಿ  ಮೂವರು  ಆರೋಪಿಗಳ ಮೇಲೆ ಆರೋಪ ದಾಖಲಿಸಲಾಗಿದೆ. 
 
ಹಣದ ಲಾಲಸೆಗೊಳಗಾಗಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ, ಅಕ್ಕ ಮತ್ತು ಭಾವನೇ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಹೇಯ ಘಟನೆ ಬಿಹಾರ್‌ನಲ್ಲಿ ವರದಿಯಾಗಿದೆ. 
 
ಅವರ ಈ ದುರುದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿ ಯಕಟಪುರದಲ್ಲಿನ ತನ್ನ ನಿವಾಸದಿಂದ ತಪ್ಪಿಸಿಕೊಂಡು, ಸಿವಿಲ್ ಲಿಬರ್ಟೀಸ್ ಪೀಪಲ್ಸ್ ಯೂನಿಯನ್ ಎಂಬ ಸ್ವಯಂಸೇವಾ ಸಂಸ್ಥೆಯ ಸಹಾಯದೊಂದಿಗೆ ಪೋಲಿಸರಿಗೆ ದೂರು ನೀಡಿದ್ದಾಳೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ. 
 
ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
 
ಕಳೆದ ಒಂದು ವರ್ಷದಿಂದ  ತಾಯಿ,ಅಕ್ಕ, ಭಾವ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಡ ಹೇರಿದರು ಮತ್ತು ನನ್ನನ್ನು ಗೋವಾ, ಪುಣಾ, ಮುಂಬೈ ಮತ್ತು ಹೈದರಾಬಾದಿನ ಅನೇಕ ಕಡೆಗಳಿಗೆ ಕಳುಹಿಸಿದರು. ಅಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದರು ಎಂದು ಪೀಡಿತ ಬಾಲಕಿ ನೋವು ತೋಡಿಕೊಂಡಿದ್ದಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸ್ಸಾಂನ ಗಾಯಕ ಜುಬಿನ್ ಗರ್ಗ್ ನಿಧನ: ನ್ಯಾಯಯುತ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ನನಗೇನಾದರೆ ರಾಜ್ಯ ಸರ್ಕಾರ, ಪ್ರಿಯಾಂಕ್ ಖರ್ಗೆ ಹೊಣೆ: ಛಲವಾದಿ ನಾರಾಯಣಸ್ವಾಮಿ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾದ ರಾಯಚೂರಿನ ಪಿಡಿಓಗೆ ಬಿಗ್ ಶಾಕ್

ಆರ್‌ಎಸ್‌ಎಸ್‌ ನಿಷೇಧದ ಹಿಂದಿನ ಉದ್ದೇಶದ ಬಗ್ಗೆ ನ್ಯಾ ಸಂತೋಷ ಹೆಗಡೆ ಸ್ಫೋಟಕ ಹೇಳಿಕೆ

ಸಚಿವೆಯಾದ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ಹಿನ್ನೆಲೆ ಗೊತ್ತಾ

ಮುಂದಿನ ಸುದ್ದಿ
Show comments