Webdunia - Bharat's app for daily news and videos

Install App

ಗರ್ಭಿಣಿಯ ತಲೆಯನ್ನು ಕತ್ತರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಾಪಿ!

Webdunia
ಮಂಗಳವಾರ, 7 ಡಿಸೆಂಬರ್ 2021 (08:09 IST)
ಮುಂಬೈ : ಗರ್ಭಿಣಿ ಮಗಳ ಶಿರಚ್ಛೇದನ ಮಾಡಿ ತಲೆಯ ಜೊತೆಗೆ ಅಮ್ಮ-ಮಗ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ಮರ್ಯಾದಾ ಹತ್ಯೆ ನಡೆದಿದ್ದು, ತಾಯಿಯ ಸಹಾಯದಿಂದ 19 ವರ್ಷದ ಸಹೋದರಿಯ ಶಿರಚ್ಛೇದನವನ್ನು ಸಹೋದರ ಮಾಡಿದ್ದಾನೆ. ಅದು ಅಲ್ಲದೇ ಅವರ ಕ್ರೂರತೆ ಎಷ್ಟು ಮುಂದೆ ಹೋಗಿದೆ ಎಂದರೆ ಆ ಮೃತ ಮಗಳ ತಲೆಯ ಜೊತೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. 
ಮನುಷ್ಯನ ಕ್ರೂರತೆ ಎಷ್ಟರ ಮಟ್ಟಿಗೆ ಇರುತ್ತೆ ಎಂಬುದಕ್ಕೆ ಇದೊಂದು ಉತ್ತಮ ಉದಹರಣೆಯಾಗಿದೆ. ಯುವತಿಯೊಬ್ಬಳು ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದು, ಇದನ್ನು ಸಹಿಸಲಾಗದೇ ಅವಳ ತಾಯಿ ಮತ್ತು ಅಣ್ಣ ಆಕೆಯನ್ನು ಕೊಲೆ ಮಾಡಿದ್ದಾರೆ. ಅದು ಅಲ್ಲದೇ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಿದ್ದರೂ ಈ ಕ್ರೂರ ಕೃತ್ಯಕ್ಕೆ ಅವರು ಕೈ ಹಾಕಿದ್ದಾರೆ.
ಕೊಲೆಯಾದ ಯುವತಿ ಕೀರ್ತಿ ಥೋರ್ ಜೂನ್ನಲ್ಲಿ ಓಡಿ ಹೋಗಿ ಮದುವೆಯಾಗಿದ್ದಳು. ಕೀರ್ತಿ ತಾಯಿ ಕಳೆದ ವಾರ ಫೋನ್ ಮಾಡಿ ನಿನ್ನನ್ನು ಭೇಟಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದರಂತೆ ಆಕೆ ಮನೆಯ ವಿಳಾಸ ನೀಡಿದ್ದು, ಭಾನುವಾರ ತಾಯಿ-ಮಗ ಕೀರ್ತಿ ಮನೆಗೆ ಹೋಗಿದ್ದಾರೆ. ಈ ವೇಳೆ ಕೀರ್ತಿಯ ಪತಿ ಬೇರೆ ಕೋಣೆಯಲ್ಲಿದ್ದರು. ತಾಯಿ ಮತ್ತು ಸಹೋದರನಿಗೆ ಕೀರ್ತಿ ಟೀ ಮಾಡುತ್ತಿದ್ದಾಗ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ತಾಯಿ ಆಕೆಯ ಕಾಲನ್ನು ಹಿಡಿದುಕೊಂಡಿದ್ದು, ಕುಡುಗೋಲು ತಂದಿದ್ದ ಸಹೋದರ ಆಕೆಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕೆಯ ಪತಿಯ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಆತ ಮನೆಯಲ್ಲಿಯೇ ಮಲಗಿದ್ದ. ಪಾತ್ರೆಗಳು ಬೀಳುವ ಸದ್ದು ಕೇಳಿ ಎಚ್ಚರಗೊಂಡು ಆತ ಅಡುಗೆ ಮನೆಗೆ ಧಾವಿಸಿದ್ದು, ಆಕೆಯ ಅಣ್ಣ ಆತನನ್ನೂ ಕೊಲ್ಲಲು ಯತ್ನಿಸಿದನು. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆಕೆಯ ಸಹೋದರ ಮನೆಯಿಂದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊರ ಬಂದಿದ್ದು, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಆರಾಮಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್‌, ಭಯಾನಕ ವಿಡಿಯೋ

ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಪಕ್ಕಾ, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments