Select Your Language

Notifications

webdunia
webdunia
webdunia
webdunia

ಗರ್ಭಿಣಿ ಮೇಲೆಯೇ ವ್ಯಕ್ತಿ ರೇಪ್!

ಗರ್ಭಿಣಿ ಮೇಲೆಯೇ ವ್ಯಕ್ತಿ ರೇಪ್!
ಭುವನೇಶ್ವರ , ಶುಕ್ರವಾರ, 17 ಮಾರ್ಚ್ 2023 (12:29 IST)
ಭುವನೇಶ್ವರ : ವ್ಯಕ್ತಿಯೊಬ್ಬ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿರುವ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ್ದು, ಇದಕ್ಕೆ ಆತನ ಪತ್ನಿಯೂ ಸಾಥ್ ನೀಡಿರುವ ವಿಲಕ್ಷಣ ಘಟನೆಯೊಂದು ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ನಡೆದಿದೆ.
 
ಅತ್ಯಾಚಾರವೆಸಗಿದ ಬಳಿಕ ದಂಪತಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸ್ಥಳೀಯ ದೇವಸ್ಥಾನಕ್ಕೆ ಕರೆದೊಯ್ದು ಘಟನೆಯನ್ನು ಯಾರಿಗೂ ವಿವರಿಸದಂತೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಆದರೆ ಮಹಿಳೆ ಪೊಲೀಸರಿಗೆ ಈ ಬಗ್ಗೆ ದೂರು ನಿಡಿದ್ದು, ಸದ್ಯ ಆರೋಪಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ. 

ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ ಕೂಡಲೇ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವೈಯಕ್ತಿಕ ಕಾರಣದಿಂದಲೇ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮಹಿಳೆಯಿಂದ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಡ್ ಸ್ಟೋರೇಜ್ನ ಮೇಲ್ಛಾವಣಿ ಕುಸಿತ : 8 ಮಂದಿ ದುರ್ಮರಣ