Webdunia - Bharat's app for daily news and videos

Install App

ಲಿಂಗ ಬದಲಾವಣೆ ನೆಪದಲ್ಲಿ ತಂತಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ!

Webdunia
ಗುರುವಾರ, 22 ಜೂನ್ 2023 (13:54 IST)
ಲಕ್ನೋ : ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯೋರ್ವ ಸಲಿಂಗಕಾಮಿಯ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
 
ಆರ್ಸಿ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರಿಯಾ (30) ಹತ್ಯೆಯಾದ ಮಹಿಳೆ. ಈಕೆ ಪುವಾಯನ್ ನಿವಾಸಿಯಾದ ಪ್ರೀತಿ (24) ಎಂಬವಳೊಂದಿಗೆ ಸ್ನೇಹ ಬೆಳೆಸಿದ್ದು, ಅವರಿಬ್ಬರ ಸ್ನೇಹ ಸಲಿಂಗ ಸಂಬಂಧವಾಗಿ ಪರಿವರ್ತನೆಯಾಗಿತ್ತು. ಅಲ್ಲದೇ ಪ್ರಿಯಾ ಜೊತೆಗಿನ ಸಂಬಂಧ ಬೆಳಕಿಗೆ ಬಂದ ಬಳಿಕ ಪ್ರೀತಿಗೆ ಬೇರೆಯವರನ್ನು ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.

ಈ ಹಿನ್ನೆಲೆ ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳ ಮೊಹಮ್ಮದಿ ಪ್ರದೇಶದ ನಿವಾಸಿಯಾದ ರಾಮನಿವಾಸ್ ಎಂಬ ತಂತ್ರಿಯನ್ನು ಭೇಟಿ ಮಾಡಿ ಪ್ರಿಯಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಅಲ್ಲದೇ ಪ್ರಿಯಾ ತನ್ನ ಲಿಂಗವನ್ನು ಬದಲಾಯಿಸಿಕೊಂಡು ಪುರುಷನಾಗಿ ಬದಲಾಗಲು ಬಯಸಿದ್ದಳು. ಇದರ ಲಾಭ ಪಡೆದ ಪ್ರೀತಿಯ ತಾಯಿ ಪ್ರಿಯಾಳನ್ನು ಕೊಲ್ಲುವ ಸಲುವಾಗಿ ತಂತ್ರಿಗೆ 1.5 ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿದ್ದಳು.

ಮಾಹಿತಿ ಆಧಾರದ ಮೇಲೆ ತಂತ್ರಿ ರಾಮನಿವಾಸ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಿಜಾಂಶ ಒಪ್ಪಿಕೊಂಡಿದ್ದಾನೆ. ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣುಮುಚ್ಚಿ ಮಲಗುವಂತೆ ತಂತ್ರಿ ಹೇಳಿದ್ದಾನೆ. ಆಕೆ ಆತನ ಮಾತನ್ನು ಒಪ್ಪಿ ಕಣ್ಣುಮುಚ್ಚಿ ಮಲಗಿದ್ದ ವೇಳೆ ಸುತ್ತಿಗೆ ಸಹಾಯದಿಂದ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ