Select Your Language

Notifications

webdunia
webdunia
webdunia
webdunia

ಮಗನಿಂದಲೇ ತಂದೆಯ ಭೀಕರ ಹತ್ಯೆ

Terrible killing of father by his own son
bangalore , ಗುರುವಾರ, 15 ಜೂನ್ 2023 (18:04 IST)
ತಂದೆ ಮಗನ ಸಂಬಂಧ ಅಂದರೆ ಹೇಳಲು ಅಸಾಧ್ಯ. ಆತ ಎಷ್ಟೇ ಬೈದರೂ ಮಕ್ಕಳ ಮೇಲಿರುವ ಪ್ರೀತಿಗೆ ಕೊನೆಯಿಲ್ಲ. ಇದಕ್ಕೆ ವಿರುದ್ದವೆಂಬಂತೆ ಇಂದು ಬೆಳಗಿನ ಜಾವ ಮಗನೇ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಮಾಗಡಿ ರಸ್ತೆಯ ಗೋಪಾಲಪುರದ 2ನೇ ಕ್ರಾಸ್​ನಲ್ಲಿ ನಡೆದಿದೆ. ಗಂಗರಾಜು ಆಲಿಯಾಸ್ ರಾಜು ಕೊಲೆಯಾದ ವ್ಯಕ್ತಿ. ಮನೆಯ ಹೊರಗೆ ತಂದೆ ರಾಜು ಮಲಗಿದ್ದರು. ಈ ವೇಳೆ ಪುತ್ರ ಚೇತನ್​ ಒರಳು ಕಲ್ಲನ್ನ ತಲೆ ಮೇಲೆ ಎತ್ತಿಹಾಕಿ ಕೊಲೆಗೈದಿದ್ದಾನೆ. ವಿಷಯ ತಿಳಿದು ಮಾಗಡಿರಸ್ತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಉಚಿತ ಬಸ್ ಸೇವೆ ಎಫೆಕ್ಟ್