Select Your Language

Notifications

webdunia
webdunia
webdunia
webdunia

ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ

Important state cabinet meeting today
bangalore , ಗುರುವಾರ, 15 ಜೂನ್ 2023 (14:11 IST)
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮೀಟಿಂಗ್ ನಡೆಯಲಿದೆ. ಸಂಪುಟ ಸಭೆ ಭಾರಿ ಕುತೂಹಲ ಮೂಡಿಸಿದೆ.ಸಭೆಯಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ಖರೀದಿ ಬಗ್ಗೆ ಚರ್ಚೆ ನಡೆಯಲಿದೆ
 
ಭಾರತ ಆಹಾರ ನಿಗಮ ಕೈಕೊಟ್ಟ ಹಿನ್ನೆಲೆ ಹೊರಗಡೆಯಿಂದ ಅಕ್ಕಿ ಖರೀದಿಸ ಬೇಕಾದ ಅನಿವಾರ್ಯವಾಗಿದ್ದು,ಹೀಗಾಗಿ ಟೆಂಡರ್ ಕರೆಯುವ ಬಗ್ಗೆ ಚರ್ಚೆ ಸಾಧ್ಯತೆ ಇದೆ.ತೆಲಂಗಾಣ,ಛತ್ತೀಸ್ ಘಡ ರಾಜ್ಯಗಳಿಂದ ಖರೀದಿ ಬಗ್ಗೆ ಪ್ರಯತ್ನ ನಡೆಸಾಗುತ್ತೆ.ಆಹಾರ ಸಚಿವರಿಂದ ಅಲ್ಲಿನ ಸರ್ಕಾರದ ಭೇಟಿ ಮಾಡಲಿದ್ದಾರೆ.ಹೀಗಾಗಿ ಅಲ್ಲಿಯೂ ಅಕ್ಕಿ ಲಭ್ಯವಾಗದಿದ್ದರೆ ಖರೀದಿಮಾಡಲಾಗುತ್ತೆ.ಟೆಂಡರ್ ಮೂಲಕ ಕರೆಯಲು ಸಮ್ಮತಿ ಸಾಧ್ಯತೆ ಇದೆ.
 
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ಸಾಧ್ಯತೆ.ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುತ್ತೆ.ಗೋ ಹತ್ಯಾ ನಿಷೇಧ ಕಾಯ್ದೆ ವಾಪಸ್ ಬಗ್ಗೆ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇಲ್ಲ- ಲಕ್ಷ್ಮೀ ಹೆಬ್ಬಾಳ್ಕರ್