Select Your Language

Notifications

webdunia
webdunia
webdunia
webdunia

ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟ

ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟ
ಲಕ್ನೋ , ಸೋಮವಾರ, 23 ಆಗಸ್ಟ್ 2021 (10:48 IST)
ಲಕ್ನೋ: ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಎರಡು ಪ್ರತ್ಯೇಕ ಘಟನೆಗಳು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ಚಿಂದ್ವಾರ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿ ರವಿವಾರ ಈ ಘಟನೆಗಳು ನಡೆದಿದೆ. ಹತ್ತು ಮಂದಿ ಗಾಯಗೊಂಡಿದ್ದಾರೆ.
ಚಿಂದ್ವಾರ ಪ್ರಕರಣದಲ್ಲಿ ತೇಜುದ್ದೀನ್ ಅನ್ಸಾರಿ (40 ವ) ಮತ್ತು ಶೇಕ್ ಇಸ್ಮಾಯಿಲ್ (70 ವ) ಮೃತಪಟ್ಟರೆ, ವಾರಣಾಸಿಯಲ್ಲಿ ಗೀತಾ ದೇವಿ (40 ವ) ಮತ್ತು ಲಲ್ಲಾ (30ವ ) ಸಾವನ್ನಪ್ಪಿದ್ದಾರೆ.
ಗಾಯಾಳುಗಳಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂದ್ವಾರ ಪ್ರಕರಣದಲ್ಲಿ ಸ್ಫೋಟದ ಶಬ್ಧ ದೂರದವರೆಗೆ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ನಲ್ಲಿ ಕೋವಿಡ್ 3ನೇ ಅಲೆ; ಮೋದಿ ಕಚೇರಿಗೆ ವರದಿ