ಉತ್ತರ ಪ್ರದೇಶ : ಮೂರು ವರ್ಷದ ತನ್ನ ಮಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾನೆಂದು ಕೋಪಗೊಂಡ ದಿನಗೂಲಿ ಕಾರ್ಮಿಕನೊಬ್ಬ ಮಗುವನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆರೋಪಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಮೃತ ಬಾಲಕ ಆತನ ಏಕೈಕ ಪುತ್ರನಾಗಿದ್ದ. ಕೋಪದಿಂದ ಇಂತಹ ನೀಚ ಕೆಲಸ ಮಾಡಿದ ಆತ ಈ ವಿಚಾರ ಯಾರಿಗೂ ತಿಳಿಸಬಾರದೆಂದು ಪತ್ನಿ ಮತ್ತು ಮಕ್ಕಳಿಗೆ ಬೆದರಿಕೆ ಹಾಕಿ ಶವದೊಂದಿದೆ ಪರಾರಿಯಾಗಿದ್ದ.
ಈ ವಿಚಾರವನ್ನು ಮೃತ ಬಾಲಕನ ತಾಯಿ ಮತ್ತು ಮಾವ ಪೊಲೀಸರಿಗೆ ತಿಳಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.