Webdunia - Bharat's app for daily news and videos

Install App

ತಾನು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಮಗಳ ಮೇಲೆ ಐದು ಬಾರಿ ಅತ್ಯಾಚಾರ ಮಾಡಿಸಿದ ಕ್ರೂರಿ ತಾಯಿ

Webdunia
ಭಾನುವಾರ, 16 ಸೆಪ್ಟಂಬರ್ 2018 (07:02 IST)
ಭುವನೇಶ್ವರ : ಹೆತ್ತ ತಾಯಿಯೇ ತಾನು ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಜೊತೆಗೆ ಮಗಳಿಗೂ ಸಂಬಂಧ ಹೊಂದುವಂತೆ ಹೇಳಿ ಬಲವಂತವಾಗಿ ಆಕೆಯ ಮೇಲೆ  ಅತ್ಯಾಚಾರ ಮಾಡಿಸಿದ  ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ.

17 ವರ್ಷದ ಬಾಲಕಿಯೊಬ್ಬಳು  ತನ್ನ ತಾಯಿ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆದ ಕಾರಣ ತಾಯಿ ಆ ವ್ಯಕ್ತಿ ಜೊತೆಗೆ ಮಗಳಿಗೂ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ ಮಾಡಿದ್ದಾಳೆ. ಇದಕ್ಕೆ ಮಗಳು ಒಪ್ಪದಿದ್ದಾಗ ಆಕೆಯ ಮೇಲೆ ಬಲವಂತವಾಗಿ ಆ ವ್ಯಕ್ತಿಯಿಂದ ಅತ್ಯಾಚಾರ ಮಾಡಿಸಿದ್ದಾಳೆ. ಅದು ಒಂದಲ್ಲ ಎರಡಲ್ಲ, ಸುಮಾರು ಐದು ಬಾರಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

 

ಈ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ ಮಗಳು ಮಾಡಿದ ಈ ಆರೋಪವನ್ನು ತಳ್ಳಿ ಹಾಕಿದ ತಾಯಿ ಆಕೆಗೆ ಕಾಯಿಲೆ ಇದೆ, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.  
  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments