Select Your Language

Notifications

webdunia
webdunia
webdunia
webdunia

ಬೀದಿ ನಾಯಿಗೆ ಹೊಡೆದಿದ್ದಕ್ಕೆ ಪೊಲೀಸ್ ಅರೆಸ್ಟ್

ಬೀದಿ ನಾಯಿಗೆ ಹೊಡೆದಿದ್ದಕ್ಕೆ ಪೊಲೀಸ್ ಅರೆಸ್ಟ್
ನೋಯ್ಡಾ , ಬುಧವಾರ, 9 ಮಾರ್ಚ್ 2022 (09:20 IST)
ನೋಯ್ಡಾ: ತನ್ನ ಮಗನಿಗೆ ಕಚ್ಚಿದ್ದ ಬೀದಿ ನಾಯಿಗೆ ಹೊಡೆದು ಕೊಂದ ಪೊಲೀಸ್ ಪೇದೆಯೊಬ್ಬನನ್ನು ಬಂಧಿಸಲಾಗಿದೆ.

ಈ ಬೀದಿ ನಾಯಿ ಪೊಲೀಸ್ ಪೇದೆಯ ಕುಟುಂಬಸ್ಥರನ್ನು ನೋಡಿದರೆ ಸದಾ ಬೊಗಳುತ್ತಿತ್ತು. ಮೊನ್ನೆ ಇನ್ನೂ ಮಿತಿ ಮೀರಿ ಕಚ್ಚಿತ್ತು. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ನಾಯಿಗೆ ಬೇಸ್ ಬಾಲ್ ಸ್ಟಿಕ್ ನಿಂದ ಹೊಡೆದಿದ್ದಾರೆ. ಪರಿಣಾಮ, ನಾಯಿ ಸಾವನ್ನಪ್ಪಿದೆ.

ಈ ಬಗ್ಗೆ ಪೊಲೀಸ್ ಪೇದೆ ಮತ್ತು ನೆರೆಹೊರೆಯವರ ನಡುವೆ ವಾಗ್ವಾದವಾಗಿತ್ತು. ಈ ಬಗ್ಗೆ ಸ್ಥಳೀಯರೇ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸ್ ಪೇದೆಯನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನಿಂದಲೇ ಸುಟ್ಟು ಕರಕಲಾದ ಯುವತಿ