ಲಕ್ನೋ : ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್ನ ಮಾಡುತ್ತಿದ್ದ ಮೊಬೈಲ್ನ ಬ್ಯಾಟರಿ ಸ್ಫೋಟಗೊಂಡು ಮಗುವೊಂದು ಮೃತಪಟ್ಟ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ನೇಹಾ(8 ತಿಂಗಳು) ಸಾವನ್ನಪ್ಪಿದ ಮಗು. ನೇಹಾಳನ್ನು ಮಂಚದ ಮೇಲೆ ಮಲಗಿಸಿ ಆಕೆಯ ತಾಯಿ ಬಟ್ಟೆ ಒಗೆಯಲು ಹೋಗಿದ್ದರು. ಅಲ್ಲೇ ಪಕ್ಕಕ್ಕೆ ಮೊಬೈಲ್ನ್ನು ಚಾರ್ಜ್ಗೆ ಹಾಕಿಟ್ಟು ಹೋಗಿದ್ದರು. ಆದರೆ ಲಾವಾ ಮೊಬೈಲ್ ಕೆಲ ಸಮಯದ ನಂತರ ಸ್ಫೋಟಗೊಂಡಿದೆ.
ಈ ಬಗ್ಗೆ ಮೃತ ಮಗು ನೇಹಾಳ ತಂದೆ ಮಾತನಾಡಿ, ಸೋಲಾರ್ ಪ್ಯಾನೆಲ್ಗೆ ಮೊಬೈಲ್ ಚಾರ್ಜ್ ಮಾಡಲಾಗುತ್ತಿತ್ತು.
ಈ ಮೊಬೈಲ್ನ್ನು 6 ತಿಂಗಳ ಹಿಂದೆ ಖರೀದಿಸಲಾಗಿತ್ತು. ಚಾರ್ಜ್ ಮಾಡಲು ಪ್ಲಗ್ಗೆ ಹಾಕಿಟ್ಟಾಗ ಅದು ಹೆಚ್ಚು ಬಿಸಿಯಾಗಿ ನಂತರ ಬೆಂಕಿ ಹತ್ತಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.