Select Your Language

Notifications

webdunia
webdunia
webdunia
webdunia

ಮೊಬೈಲ್ ಸಾಕು ಎಂದಿದ್ದಕ್ಕೆ 7 ನೇ ಅಂತಸ್ತಿನಿಂದ ಜಿಗಿದು 15ರ ಬಾಲಕಿ ಆತ್ಮಹತ್ಯೆ!

ಮೊಬೈಲ್ ಸಾಕು ಎಂದಿದ್ದಕ್ಕೆ 7 ನೇ ಅಂತಸ್ತಿನಿಂದ ಜಿಗಿದು 15ರ ಬಾಲಕಿ ಆತ್ಮಹತ್ಯೆ!
ಮುಂಬೈ , ಮಂಗಳವಾರ, 11 ಏಪ್ರಿಲ್ 2023 (09:13 IST)
ಮುಂಬೈ : ಮೊಬೈಲ್ ಬಳಸಲು ಅನುಮತಿ ನೀಡದ್ದಕ್ಕೆ ಬೇಸರಗೊಂಡ ಬಾಲಕಿಯೊಬ್ಬಳು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಪಶ್ಚಿಮ ಉಪನಗರದ ಮಾಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಘಟನೆ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಬಾಲಕಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಾಲಕಿಯ ಕುಟುಂಬಸ್ಥರು ಆಕೆಯ ಮೊಬೈಲ್ ಅನ್ನು ಕಿತ್ತುಕೊಂಡಿದ್ದರಿಂದ ಬೇಸರಗೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ : ಅಮಿತ್ ಶಾ