Select Your Language

Notifications

webdunia
webdunia
webdunia
webdunia

ಕಮರಿಗೆ ಬಿದ್ದ ವಾಹನ, ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ

Jammu and Kashmir's Anantnag

Sampriya

, ಶನಿವಾರ, 27 ಜುಲೈ 2024 (19:58 IST)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ದಕ್ಸಮ್ ಪ್ರದೇಶದಲ್ಲಿ ಶನಿವಾರ ವಾಹನ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಬಲಿಯಾದವರಲ್ಲಿ ಒಬ್ಬ ಪುರುಷ, ಇಬ್ಬರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದ್ದಾರೆ ಮತ್ತು ಅವರು ಕಿಶ್ತ್ವಾರ್‌ನಿಂದ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಶ್ತ್ವಾರ್-ಸಿಂಥನ್ ರಸ್ತೆಯ ಅರಶನ್ ದಕ್ಸಮ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಪೊಲೀಸ್ ಸಹ ಸಾವನ್ನಪ್ಪಿದ್ದಾರೆ. ಈ ರಸ್ತೆಯು ಕಾಶ್ಮೀರ ಕಣಿವೆಯ ಅನಂತನಾಗ್ ಜಿಲ್ಲೆಯನ್ನು ಜಮ್ಮು ವಿಭಾಗದ ಕಿಶ್ತ್ವಾರ್ ಜಿಲ್ಲೆಗೆ ಸಂಪರ್ಕಿಸುತ್ತದೆ.

"ವಾಹನವು ಮದ್ವಾ ಕಿಶ್ತ್ವಾರ್‌ನಿಂದ ಬರುತ್ತಿತ್ತು. ಈ ವೇಳೆ ಕಾರು ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಸಿಗರೇಟ್ ಹೊಗೆ ರೋಡಲ್ಲಿ ಬಿಟ್ರೆ ಹುಷಾರ್, ಬೆಂಗ್ಳೂರಿನ ಹೊಟೇಲ್‌, ಪಬ್, ಬಾರ್‌ಗಳಿಗೆ ಹೊಸ ರೂಲ್ಸ್‌