Publish Date: Sun, 30 Sep 2018 (08:57 IST)
Updated Date: Sun, 30 Sep 2018 (09:00 IST)
ಚಂಡೀಗಢ : 22 ವರ್ಷದ ನವವಿವಾಹಿತೆಯ ಮೇಲೆ ಆಕೆಯ ಪತಿ ಸೇರಿದಂತೆ 7 ಜನರು ಸಾಮೂಹಿಕ ಅತ್ಯಾಚಾರ ಎಸೆಗಿದ ಅಮಾನವೀಯ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.
ಸಂತ್ರಸ್ತೆಗೆ ಸೆಪ್ಟೆಂಬರ್ 12ರಂದು ಮದುವೆ ಆಗಿತ್ತು. ಮದುವೆಯಾದ ಮಾರನೇ ದಿನ ಪತಿ ಹಾಗೂ ಆತನ ಕೆಲ ಸಂಬಂಧಿಕರು ಜ್ಯೂಸ್‍ನಲ್ಲಿ ನಶೆ ಔಷಧಿ ಹಾಕಿ ಪ್ರಜ್ಞೆ ತಪ್ಪಿಸಿ ರೂಮ್ ವೊಂದರಲ್ಲಿ ಕೂಡಿ ಹಾಕಿ ಪತಿ, ಆತನ ಸಹೋದರ, ಸಹೋದರಿಯ ಪತಿ ಅತ್ಯಾಚಾರ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಸೆಪ್ಟೆಂಬರ್ 14ರಂದು ಪೂಜೆ ಮಾಡಲು ಬಂದಿದ್ದ ನಾಲ್ವರು ಪೂಜಾರಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸೆಗಿದ್ದಾರೆ. ಇದಕ್ಕೆ ಸಂತ್ರಸ್ತೆಯ ಪತಿಯ ತಾಯಿ, ತಂದೆ ಹಾಗೂ ಸಹೋದರಿ ಸಹಕಾರ ನೀಡಿದ್ದಾರೆ. ಅಲ್ಲದೇ ಅತ್ಯಾಚಾರದ ಬಳಿಕ ಮಹಿಳೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಈ ಕುರಿತು ಸಂತ್ರಸ್ತ ಮಹಿಳೆಯ ತಂದೆ ಸೆಪ್ಟೆಂಬರ್ 26ರಂದು ಕುರುಕ್ಷೇತ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕುರುಕ್ಷೇತ್ರ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಶೀಲವಂತಿ, ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.