Select Your Language

Notifications

webdunia
webdunia
webdunia
webdunia

ಮೂವರನ್ನು ಒಂದೇ ಮಂಟಪದಲ್ಲಿ ಮದುವೆ ಆದ ಭೂಪ: ಮಕ್ಕಳೇ ಸಾಕ್ಷಿ!

Marry Partners madya pradeh ಮಧ್ಯಪ್ರದೇಶ ಜೊತೆಗಾರ್ತಿ ಮದುವೆ
bengaluru , ಮಂಗಳವಾರ, 3 ಮೇ 2022 (16:53 IST)
ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ವ್ಯಕ್ತಿಯೊಬ್ಬ ಬುಡಕಟ್ಟು ಪದ್ಧತಿಯ ಪ್ರಕಾರ ಏಕಕಾಲದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ.
ಮಧ್ಯಪ್ರದೇಶದ ಭೋಪಾಲ್‍ನಿಂದ ಸುಮಾರು 400ಕಿ.ಮೀ ದೂರದಲ್ಲಿರುವ ನಾನ್‍ಪುರ್ ಗ್ರಾಮದ ಮಾಜಿ ಸರ್‍ಪಂಚ್ ಮೌರ್ಯ (42) ಅವರು ನಾನಾಬಾಯಿ, ಮೇಳ ಮತ್ತು ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ.
ಮೌರ್ಯ 2003ರಲ್ಲಿ ನಾನಾಬಾಯಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಒಂದೇ ಮನೆಯಲ್ಲೇ ವಾಸಿಸುತ್ತಿದ್ದರು. ಅವರೊಂದಿಗೆ ಮತ್ತಿಬ್ಬರು ಮಹಿಳೆಯರಾದ ಮೇಳ ಮತ್ತು ಸಕ್ರಿ ಕಳೆದ 15 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು.
ವಿವಾಹ ಸಮಾರಂಭದಲ್ಲಿ ಮೂವರು ಮಹಿಳೆಯರ 6 ಮಕ್ಕಳು ಪಾಲ್ಗೊಂಡಿದ್ದರು. ಮೋರಿ ಫಾಲಿಯಾ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದ ಫೋಟೋ ಮತ್ತು ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಮೂರು ದಿನಗಳ ಕಾಲ ಬುಡಕಟ್ಟು ಜನಾಂಗದವರ ಪ್ರಕಾರ ವಿಜೃಂಭಣೆಯಿಂದ ವಿವಾಹ ನಡೆಯಿತು.
ಈ ಸಂಬಂಧಗಳು ಪ್ರಾರಂಭವಾದಾಗ ನನ್ನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದ್ದರಿಂದ ಸಂಬಂಧದಿಂದ ಮಕ್ಕಳನ್ನು ಪಡೆದರೂ ನಾನು ಅವರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಮದುವೆ ಆಗುವ ಸ್ಥಿತಿಯಲ್ಲಿದ್ದೇವೆ ಎಂದು ಮದುವೆ ಹುಡುಗ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಮೇಲೆ ಬಿದ್ದ ಫ್ಯಾನ್!