Select Your Language

Notifications

webdunia
webdunia
webdunia
webdunia

ಕೋವಿಡ್‌ ಗೆ ದೇಶದಲ್ಲಿ 40 ಲಕ್ಷ ಜನರು ಬಲಿ: ರಾಹುಲ್‌ ಗಾಂಧಿ

ಕೋವಿಡ್‌ ಗೆ ದೇಶದಲ್ಲಿ 40 ಲಕ್ಷ ಜನರು ಬಲಿ: ರಾಹುಲ್‌ ಗಾಂಧಿ
bengaluru , ಭಾನುವಾರ, 17 ಏಪ್ರಿಲ್ 2022 (17:05 IST)

ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆ ಸಮಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ ೪ ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜಾಗತಿಕವಾಗಿ ಕೋವಿಡ್-19 ಸಾವುಗಳನ್ನು ಜನರಿಗೆ ತಿಳಿಸಲು WHOದ ಪ್ರಯತ್ನಕ್ಕೆ ಭಾರತ ಅಡ್ಡಿಪಡಿಸುತ್ತಿದೆ ಎಂದರು.

ಮೋದಿ ಜೀ ಸತ್ಯವನ್ನು ಮಾತನಾಡುವುದಿಲ್ಲ ಅಥವಾ ಸತ್ಯವನ್ನು ಮಾತನಾಡಲು ಬಿಡುವುದಿಲ್ಲ. ಆಮ್ಲಜನಕದ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಸುಳ್ಳು ಹೇಳುತ್ತಾರೆ ಎಂದು ಅವರು ಆರೋಪಿಸಿದರು.

ನಾನು ಈ ಮೊದಲೇ ಹೇಳಿದೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ 5 ಲಕ್ಷ ಅಲ್ಲ 40 ಲಕ್ಷ ಜನರು ಸಾವನಪ್ಪಿದ್ದಾರೆ ಎಂದು ಪುನಃ ಆರೋಪಿಸಿದ್ದಾರೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಮೋದಿ ಸಂತ್ರಸ್ತರ ಕುಟುಂಬಕ್ಕೆ ತಲಾ ನಲ್ಕು ಲಕ್ಷ ರೂಪಾಯಿ ಪರಿಹಾರವನ್ನು ನೀಡಿ ಎಂದು ಆಗ್ರಹಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರ ಭಾರತದಲ್ಲಿ ಕೋವಿಡ್ ಸಮಯದಲ್ಲಿ ಸಂಭವಿಸಿದ ಸಾವುಗಳ ಕುರಿತು ಭಾರತದಲ್ಲಿ ಗಣಿತಾಧಾರದಲ್ಲಿ ಲೆಕ್ಕ ಹಾಕುವುದಿಲ್ಲ ಎಂದು ಹೇಳಿದೆ. ಸರ್ಕಾರವು ಕೋವಿಡ್ ಸಾವು ನೋವುಗಳ ಕುರಿತು ನಿಜವಾದ ಅಂಕಿಅಂಶವನ್ನು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೂ 5,21,751 ಸಾವನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳುತ್ತಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ ಐ ನೇಮಕಾತಿಯಲ್ಲಿ ಅಕ್ರಮ ಸಿಬಿಐಗೆ ವಹಿಸಿ: ಪ್ರಿಯಾಂಕ್‌ ಖರ್ಗೆ