Select Your Language

Notifications

webdunia
webdunia
webdunia
webdunia

ಬ್ಯಾಂಕ್‍ಗಳಿಗೆ 4 ದಿನ ರಜೆ

ಬ್ಯಾಂಕ್‍ಗಳಿಗೆ 4 ದಿನ ರಜೆ
ನವದೆಹಲಿ , ಗುರುವಾರ, 9 ಡಿಸೆಂಬರ್ 2021 (15:24 IST)
ನವದೆಹಲಿ : ಭಾರತದಲ್ಲಿ ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳು ಬ್ಯಾಂಕ್ಗೆ ರಜೆ ಇರಲಿದೆ.

ಹೀಗಾಗಿ ಜನರು ಅಗತ್ಯವಿರುವ ಬ್ಯಾಂಕ್ ವಹಿವಾಟುಗಳನ್ನು ಆದಷ್ಟು ಬೇಗವೇ ಮುಗಿಸಿದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು.
ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳವರೆಗೆ ಬ್ಯಾಂಕ್ಗಳಿಗೆ ರಜೆ ಇರಲಿದ್ದು, ಜನರು ತಮ್ಮ ಬ್ಯಾಂಕ್ಗಳಲ್ಲಿ ಅತ್ಯಂತ ಅಗತ್ಯ ಹಾಗೂ ತುರ್ತು ವಹಿವಾಟುಗಳ ಬಾಕಿ ಉಳಿಸಿದ್ದಲ್ಲಿ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ.
ಬ್ಯಾಂಕ್ ರಜೆಯ ಸಮಯದಲ್ಲಿ ಗ್ರಾಹಕರು ಪ್ರಮುಖ ಕೆಲಸಗಳಿಗೆ ಬೌತಿಕವಾಗಿ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಈ ಸಮಯದಲ್ಲಿ ಎಲ್ಲಾ ಆನ್ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೇ ಬಳಕೆ ಮಾಡಬಹುದು ಎಂಬುದನ್ನು ಗಮನಿಸಬೇಕು.
ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16(ಗುರುವಾರ) ಹಾಗೂ 17(ಶುಕ್ರವಾರ)ರಂದು ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.
ಡಿಸೆಂಬರ್ 16- ಬ್ಯಾಂಕ್ ಯೂನಿಯನ್ ಮುಷ್ಕರ
ಡಿಸೆಂಬರ್ 17- ಬ್ಯಾಂಕ್ ಯೂನಿಯನ್ ಮುಷ್ಕರ
ಡಿಸೆಂಬರ್ 18- ಯು ಸೋಸೋ ಮರಣ ವಾರ್ಷಿಕೋತ್ಸವ (ಶಿಲ್ಲಾಂಗ್)
ಡಿಸೆಂಬರ್ 19- ಭಾನುವಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಇತ್ತೀಚೆಗೆ ಹೇಳಿದ್ದರು. ಈ ನಿರ್ಧಾರ ದೇಶಾದ್ಯಂತ ಹಲವಾರು ಬ್ಯಾಂಕ್ ಉದ್ಯೋಗಿಗಳ ಹಿನ್ನೆಡೆಗೆ ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊನೆ ಕ್ಷಣದಲ್ಲಿ ರಾವತ್ ಕುಡಿಯಲು ನೀರು ಕೇಳೀದ್ರಂತೆ, ಮುಂದೇನಾಯ್ತು?