ಹೈದರಾಬಾದ್: ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇ.ಡಬ್ಲ್ಯೂ.ಎಸ್) ಕೋಟಾದಡಿದಲ್ಲಿ ಸರ್ಕಾರಿ ಹುದ್ದೆ ಮತ್ತು ಸೇವೆಗಳಲ್ಲಿ ಮಹಿಳೆಯರಿಗೆ ಶೇ 33.3ರಷ್ಟು ಮೀಸಲಾತಿ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ಇ.ಡಬ್ಲ್ಯೂ.ಎಸ್ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಮಂಗಳವಾರ ಅಲ್ಲಿನ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
'ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇ.ಡಬ್ಲ್ಯೂ.ಎಸ್) ಕೋಟಾದಡಿಯಲ್ಲಿ ಮೀಸಲಾಗಿರುವ ಹುದ್ದೆಗಳು ಮತ್ತು ಸೇವೆಗಳ ಆರಂಭಿಕ ನೇಮಕಾತಿಯಲ್ಲಿ ಶೇ 33.3 ರಷ್ಟು ಮಹಿಳೆಯರಿಗೆ ಹಂಚಿಕೆಯಾಗಬೇಕು' ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಕೇಂದ್ರ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಆದರಂತೆ ತೆಲಂಗಾಣ ಸರ್ಕಾರವೂ ಕೂಡ ಮೀಸಲಾತಿಯನ್ನು ಜಾರಿಗೆ ತಂದಿದೆ. ಇದರಿಂದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸೋಮೇಶ್ ಕುಮಾರ್ ಹೇಳಿದ್ದಾರೆ.