Webdunia - Bharat's app for daily news and videos

Install App

ಕಾಬೂಲ್ನಿಂದ ಸಹಸ್ರಾರು ಭಯೋತ್ಪಾದಕರೂ ಸ್ಥಳಾಂತರವಾಗಿರಬಹುದು: ಟ್ರಂಪ್ ವಾಗ್ದಾಳಿ

Webdunia
ಬುಧವಾರ, 25 ಆಗಸ್ಟ್ 2021 (14:20 IST)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಅಫ್ಗನ್ ನೀತಿಯ ವಿರುದ್ಧ ವಾಗ್ದಾಳಿ ಮಾಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಅಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಸಾವಿರಾರು ಭಯೋತ್ಪಾದಕರು ಅಫ್ಗನ್ನಿಂದ ಹೊರಕ್ಕೆ ಹೋಗಿರಬಹುದು' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಬೈಡನ್ ಅವರು ಅಫ್ಗಾನಿಸ್ತಾನವನ್ನು ಭಯೋತ್ಪಾದಕರಿಗೆ ಒಪ್ಪಿಸಿದ್ದಾರೆ. ಅಲ್ಲದೆ ನಮ್ಮ ನಾಗರಿಕರಿಗಿಂತ ಮೊದಲು ಸೇನೆಯನ್ನು ಕರೆಸಿಕೊಂಡಿದ್ದರಿಂದ ಅಲ್ಲಿ ಸಾವಿರಾರು ಅಮೆರಿಕನ್ನರು ಸಾಯುವ ಸ್ಥಿತಿಗೆ ಬಂದಿದ್ದಾರೆ' ಎಂದು ಟ್ರಂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಇಲ್ಲಿಯವರೆಗೆ ಸ್ಥಳಾಂತರಿಸಿರುವ 26 ಸಾವಿರ ಜನರಲ್ಲಿ ಕೇವಲ 4 ಸಾವಿರ ಜನರು ಅಮೆರಿಕನ್ನರು' ಎಂದು ಬೇಸರ ವ್ಯಕ್ತಪಡಿಸಿರುವ ಅವರು, 'ಪೂರ್ಣ ಅಫ್ಗಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನ್ಗಳು ಅಮೆರಿಕನ್ನರನ್ನು ಸ್ಥಳಾಂತರಿಸುವ ವಿಮಾನಗಳಿಗೆ ಅನುಮತಿ ನೀಡುವುದಿಲ್ಲ' ಎಂದಿದ್ದಾರೆ.
'ಸ್ಥಳಾಂತರಿಸುವ ಕಾರ್ಯದಲ್ಲಿ ಅಫ್ಗನ್ನಿಂದ ಎಷ್ಟು ಸಾವಿರ ಭಯೋತ್ಪಾದಕರನ್ನು ಏರ್ಲಿಫ್ಟ್ ಮೂಲಕ ಪ್ರಪಂಚದಾದ್ಯಂತ, ನೆರೆ ಹೊರೆ ದೇಶಗಳಲ್ಲಿ ಇಳಿಸಲಾಗಿದೆಯೋ ಊಹಿಸಲಾಗದು. ಎಂತಹ ಗಂಭೀರ ಲೋಪ ಇದು. ಯಾವುದೇ ಪರಿಶೀಲನೆಯಾಗದೆ ಈ ಕಾರ್ಯ ನಡೆದಿದೆ. ಜೋ ಬೈಡನ್ ಅವರು ಎಷ್ಟು ಭಯೋತ್ಪಾದಕರನ್ನು ಅಮೆರಿಕಕ್ಕೆ ಕರೆತಂದಿದ್ದಾರೆಯೊ ಗೊತ್ತಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮನೆಯಲ್ಲೇ ಇರುವಂತೆ ಒತ್ತಾಯಿಸುವ ತಾಲಿಬಾನ್ ನಡೆಗೆ ಇಲ್ಲಿದೆ ಕಾರಣ...
ಇದರ ನಡುವೆ ರಿಪಬ್ಲಿಕನ್ ಸಂಸದ ಮೈಕ್ ವಾಲ್ಟ್ಜ್ ಅವರು, ತಾಲಿಬಾನ್ ದಾಳಿಯ ವೇಗ ಮತ್ತು ಸ್ವರೂಪದ ಬಗ್ಗೆ ಮಿಲಿಟರಿ, ಗುಪ್ತಚರ ಸಲಹೆಗಾರರ ಸಲಹೆಗಳನ್ನು ಬೈಡನ್ ಪಾಲಿಸಿಲ್ಲ ಎಂದು ಖಂಡಿಸಿ, ಜನಪ್ರತಿನಿಧಿಗಳ ಸಭೆಯಲ್ಲಿ (ಹೌಸ್ ಆಫ್ ರೆಪ್ರೆಡೆಂಟೆಟಿವ್) ನಿರ್ಣಯ ಮಂಡಿಸಿದ್ದಾರೆ. ಭಯೋತ್ಪಾದನೆ ನಿಗ್ರಹ, ಅಮೆರಿಕದ ಜನರನ್ನು ಸ್ಥಳಾಂತರಿಸುವ ಯೋಜನೆ ಹಾಗೂ ಅಧ್ಯಕ್ಷರ ನೀತಿಗಳಿಂದಾಗಿ ಅಮೆರಿಕದ ವಿಶ್ವಾಸಾರ್ಹತೆಗೆ ಪೆಟ್ಟಾಗಿದೆ ಎಂದು ಅವರು ದೂರಿದ್ದಾರೆ.
ಬೈಡನ್ ಅವರ ಈ ನೀತಿಗಳು ಜಾಗತಿಕ ವೇದಿಕೆಯಲ್ಲಿ ಅಮೆರಿಕವನ್ನು ಮುಜುಗರಕ್ಕೀಡು ಮಾಡಿದೆ. ಅಲ್ಲದೆ ಕೆಟ್ಟ ವಿದೇಶಾಂಗ ನೀತಿಯ ಮೂಲಕ ಪ್ರಮಾದ ಸೃಷ್ಟಿಸಿದ್ದಾರೆ ಎಂದು ವಾಲ್ಟ್ಜ್ ಹೇಳಿದ್ದಾರೆ.
ಈ ನಿರ್ಣಯವನ್ನು ಅಲ್ಪಸಂಖ್ಯಾತ ನಾಯಕರಾದ ಕೆವಿನ್ ಮೆಕಾರ್ಥಿ, ಸ್ಟೀವ್ ಸ್ಕಾಲೈಸ್ ಮತ್ತು ಕಾನ್ಫರೆನ್ಸ್ ಅಧ್ಯಕ್ಷೆ ಎಲಿಸ್ ಸ್ಟೆಫಾನಿಕ್ ಬೆಂಬಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments