Webdunia - Bharat's app for daily news and videos

Install App

ಕುಡಿದ ಮತ್ತಿನಲ್ಲಿ ಉಬೇರ್ ಕಾರು ಚಾಲಕನ ಮೇಲೆ ಹಲ್ಲೆ ನಡಿಸಿದ ನಟಿಯ ಬಂಧನ

Webdunia
ಗುರುವಾರ, 21 ಸೆಪ್ಟಂಬರ್ 2017 (15:16 IST)
ಮದ್ಯ ಸೇವಿಸಿದ ಮತ್ತಿನಲ್ಲಿ ಉಹೇರ್ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟಿವಿ ಧಾರವಾಹಿ ನಟಿ ಸೇರಿದಂತೆ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. 
ಕಣ್ಣೂರು ಮೂಲದವರಾದ ಮೂವರು ಮಹಿಳೆಯರು ಮದ್ಯ ಸೇವಿಸಿದ ನಶೆಯಲ್ಲಿ ಉಬೇರ್ ಕಾರು ಚಾಲಕ ಶಫೀಕ್‌ ಮೇಲೆ ಹಾಡಹಗಲೇ ಹಲ್ಲಿ ನಡೆಸಿದ್ದರು. ಹಲ್ಲೆ ನಡೆಸಿದ ಮಹಿಳೆಯರಲ್ಲಿ ಒಬ್ಬಳು ಟಿವಿ ಧಾರವಾಹಿ ನಟಿಯಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಕುಂಬಳಂ ಮೂಲದ ಕಾರು ಚಾಲಕ ಶಫೀಕ್‌ಗೆ ಹಲ್ಲೆಯಿಂದ ಗಂಭೀರವಾದ ಗಾಯಗಳಾಗಿದ್ದು ಎರ್ನಾಕುಲಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಫೀಕ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 
 
ಒಂದೇ ಪ್ರದೇಶಕ್ಕೆ ತೆರಳುವ ಮತ್ತು ಬಾಡಿಗೆಯನ್ನು ಶೇರ್ ಮಾಡಿಕೊಳ್ಳುವ ಉಬೇರ್ ಪೂಲ್ ಸೌಲಭ್ಯವನ್ನು ಪಡೆದು ಮಹಿಳೆಯರು ಕಾರ್ ಬುಕ್ ಮಾಡಿದ್ದರು. ಏತನ್ಮಧ್ಯೆ, ಕಾರಿನಲ್ಲಿ ಮತ್ತೊಬ್ಬ ಪ್ರಯಾಣಿಕರಿರುವುದು ಕಂಡು ಚಾಲಕನೊಂದಿಗೆ ಮಹಿಳೆಯರು ವಾಗ್ವಾದಕ್ಕಿಳಿದಿದ್ದಾರೆ.
 
ಉಬೇರ್ ಕಾರು ಚಾಲಕ ಶಫೀಕ್ ತಮ್ಮೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ ಹಲ್ಲೆ ನಡೆಸಿದ್ದೇವೆ ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳು ಮಹಿಳೆಯರು ಮದ್ಯ ಸೇವಿಸಿದ ಮತ್ತಿನಲ್ಲಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಪೊಲೀಸರು ಮಹಿಳೆಯರ ವಿರುದ್ಧ ದೂರು ದಾಖಲಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲಿಡಬೇಕು: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದ

ದಾನ ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ: ಡಿಕೆ ಶಿವಕುಮಾರ್

ನಾಡ ಹಬ್ಬಕ್ಕೆ ಬಾನು ಮುಷ್ತಾಕ್ ಚಾಲನೆ ವಿವಾದಕ್ಕೆ ಐದು ಪ್ರಶ್ನೆ ಹಾಕಿದ ಆರ್ ಅಶೋಕ್

ಧರ್ಮಸ್ಥಳ ಪ್ರಕರಣದಿಂದ ಮಹಿಳೆಯರೇ ಹೆಚ್ಚು ಕಣ್ಣೀರಿಟ್ಟಿದ್ದಾರೆ: ಡಾ ಡಿ ವೀರೇಂದ್ರ ಹೆಗ್ಗಡೆ

ಕಾಂಗ್ರೆಸ್ ಗೆ ಆಜಾನ್ ಕೂಗುವ ಮೈಕ್ ಮುಟ್ಟುವ ತಾಕತ್ತಿಲ್ಲ: ಬಿಜೆಪಿ ಟೀಕೆ

ಮುಂದಿನ ಸುದ್ದಿ
Show comments