Select Your Language

Notifications

webdunia
webdunia
webdunia
Thursday, 13 March 2025
webdunia

ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಕಲಬುರ್ಗಿ , ಶನಿವಾರ, 16 ಸೆಪ್ಟಂಬರ್ 2017 (20:21 IST)
ಕಲಬುರ್ಗಿ: ಸಾರಿಗೆ ಬಸ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರ್ಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್ ನಲ್ಲಿ ನಡೆದಿದೆ.

ಜ್ಯೋತಿ(26), ಸಾರಿಗೆ ಸಂಸ್ಥೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ಸೇಡಂ ಡಿಪೋಗೆ ಸೇರಿದ ಕೆಎ-32 ಎಫ್ -1430 ಬಸ್ ನಲ್ಲಿ ಹೆರಿಗೆಯಾಗಿದೆ. ಚಿಂಚೋಳಿ ತಾಲೂಕಿನ ಛತ್ತರಸಾಲ ಗ್ರಾಮದ ಜ್ಯೋತಿ, ಹೆರಿಗೆಗೆಂದು ತಾಂಡೂರಗೆ ಸಾರಿಗೆ ಬಸ್ ನಲ್ಲಿ ತೆರಳುತ್ತಿದ್ದಳು. ಸೇಡಂ ಸಮೀಪವಿರುವಾಗಲೇ, ತಾಯಿ ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
webdunia

ಹೆರಿಗೆ ನಂತರ ಮಾನವೀಯತೆ ಮೆರೆದ ಬಸ್ ಚಾಲಕ ಶಿವಾಜಿ ಮತ್ತು ಕಂಡಕ್ಟರ್ ಪ್ರಶಾಂತ್, ಬಸ್ ನ್ನು ನೇರವಾಗಿ ಸೇಡಂ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸಹಾಯ ಮಾಡಿದ್ದಾರೆ. ಹೀಗಾಗಿ ತಾಯಿ ಮಗು ಇಬ್ಬರೂ ಆರಾಮವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಡಹಗಲೇ ಎಟಿಎಂ ಲೂಟಿ: 18 ಲಕ್ಷ ಹೊತ್ತೊಯ್ದ ಕಳ್ಳರು