ರಷ್ಯಾ ವಿರುದ್ಧದ ದಾಳಿಯಲ್ಲಿ 3000 ಯೋಧರು ಹುತಾತ್ಮರಾಗಿದ್ದು, 10 ಸಾವಿರಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೈಮರ್ ಜೆಲೆನ್ ಸ್ಕಿ ಹೇಳಿದ್ದಾರೆ.
ರಷ್ಯಾ ದಾಳಿ ಆರಂಭಿಸಿ ಒಂದು ತಿಂಗಳು ಕಳೆದಿದ್ದು, ಇನ್ನೆಷ್ಟು ಯೋಧರನ್ನು ಕಳೆದುಕೊಳ್ಳುತ್ತೇವೆ ಎಂಬುದು ಗೊತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಷ್ಯಾ ಹಿಂಪಡೆದ ನಗರಗಳಲ್ಲಿ ಇದುವರೆಗೆ ಸುಮಾರು 900 ನಾಗರಿಕರ ಮೃತದೇಹಗಳು ಪತ್ತೆಯಾಗಿವೆ. ಬಹುತೇಕ ಜನರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.