Select Your Language

Notifications

webdunia
webdunia
webdunia
webdunia

25 ಯೋಧರ ಮಾರಣ ಹೋಮ ನಡೆಸಿದ ನಕ್ಸಲರು

25 ಯೋಧರ ಮಾರಣ ಹೋಮ ನಡೆಸಿದ ನಕ್ಸಲರು
ಛತ್ತೀಸ್ ಘಡ , ಮಂಗಳವಾರ, 25 ಏಪ್ರಿಲ್ 2017 (08:23 IST)
ಛತ್ತೀಸ್ ಘಡ: ಛತ್ತೀಸ್ ಘಡದ ಸುಕ್ಮಾದಲ್ಲಿ ಮತ್ತೊಮ್ಮೆ ನಕ್ಸಲರು ಅಟ್ಟಹಾಸ ಮೆರೆದಿದ್ದು, 25 ಸಿಆರ್ ಪಿಎಫ್ ಯೋಧರ ಮಾರಣ ಹೋಮ ನಡೆಸಿದ್ದಾರೆ.

 
ಸೌತ್ ಬಾಸ್ಟರ್ ಪ್ರದೇಶದಲ್ಲಿ 74 ನೇ ಬೆಟಾಲಿಯನ್ ಪಡೆ ಮೇಲೆ ನಕ್ಸಲರು ಯದ್ವಾ ತದ್ವಾ ದಾಳಿ ನಡೆಸಿದರು. ರಸ್ತೆ ತೆರವುಗೊಳಿಸುವ ಕೆಲಸ ಮಾಡುತ್ತಿದ್ದ ಯೋಧರ ಮೇಲೆ ನಕ್ಸಲರು ಏಕಾಏಕಿ ದಾಳಿ ನಡೆಸಿದ್ದಾರೆ. ಅಲ್ಲದೆ ಯೋಧರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಯೋಧರ ಪ್ರಾಣ ತ್ಯಾಗವನ್ನು ಸುಮ್ಮನೇ ಹಾಳುಗೆಡವುದಿಲ್ಲ. ತಕ್ಕ ಪ್ರತ್ಯುತ್ತರ ಕೊಡುತ್ತೇವೆ ಎಂದು ಗುಡುಗಿದ್ದಾರೆ. 25 ಮಂದಿ ಸಾವನ್ನಪ್ಪಿದ್ದು, ಇನ್ನೂ 7 ರಿಂದ 8 ಮಂದಿ ನಾಪತ್ತೆಯಾಗಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ದೇಶದಾದ್ಯಂತ ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಈಗ ವಜಾಗೊಳಿಸುವ ಪರ್ವ!