Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಈಗ ವಜಾಗೊಳಿಸುವ ಪರ್ವ!

ತಮಿಳುನಾಡಿನಲ್ಲಿ ಈಗ ವಜಾಗೊಳಿಸುವ ಪರ್ವ!
Chennai , ಮಂಗಳವಾರ, 25 ಏಪ್ರಿಲ್ 2017 (08:05 IST)
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ದೃಶ್ಯಗಳೇ ಬದಲಾಗಿವೆ. ಇದುವರೆಗೆ ಪಕ್ಷವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡವರು ಇದೀಗ ಇದ್ದಕ್ಕಿದ್ದಂತೆ ಗೇಟ್ ಪಾಸ್ ಪಡೆದಿದ್ದಾರೆ.

 
ಇದುವರೆಗೆ ಜೈಲಿನಿಂದಲೇ ರಾಜ್ಯಭಾರ ನಡೆಸುತ್ತಿದ್ದ ಚಿನ್ನಮ್ಮ ಶಶಿಕಲಾ ನಟರಾಜನ್ ಹಾಗೂ ಅವರ ಸಂಬಂಧಿ ದಿನಕರನ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಬಂಡಾಯ ಬಣ ಕಟ್ಟಿಕೊಂಡಿದ್ದ ಪನೀರ್ ಸೆಲ್ವಂ ಆಡಳಿತಾರೂಢ, ಎಐಎಡಿಎಂಕೆ ಜತೆ ವಿಲೀನಗೊಂಡಿದ್ದಾರೆ.

ಚುನಾವಣಾ ಚಿಹ್ನೆಗಾಗಿ ದಿನಕರನ್ ಲಂಚದ ಅಮಿಷವೊಡ್ಡಿ ಸಿಕ್ಕಿ ಬೀಳುತ್ತಿದ್ದಂತೆ ಪಕ್ಷದ ಚಿತ್ರಣವೇ ಬದಲಾಯಿತು. ಇದಕ್ಕಾಗಿಯೇ ಕಾದಿದ್ದ ಪನೀರ್ ಸೆಲ್ವಂ ಬಣ ಮುಖ್ಯಮಂತ್ರಿ ಪಳನಿಸ್ವಾಮಿ ಜತೆ ಕೈ ಜೋಡಿಸಿದ್ದು, ಪಕ್ಷದ ನಾಯಕಿಯಾಗಿ ಮೆರೆಯುತ್ತಿದ್ದ ಶಶಿಕಲಾ ಮತ್ತು ಅವರ ಆಪ್ತ ಬೆಂಬಲಿಗರನ್ನು ಪಕ್ಷದಿಂದ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

‘ಹೋಗ್ಬಿಟ್ಯಲ್ಲೇ ಯವ್ವಾ…’ ಬದುಕಿ ಬಾರದ ಕಾವೇರಿಗಾಗಿ ಹೆತ್ತವರ ರೋಧಮ