Webdunia - Bharat's app for daily news and videos

Install App

ಕಚ್ಚಾತೈಲದ ಹಡಗಿನಲ್ಲಿ 21 ಪಾಕ್‌ ಸಿಬ್ಬಂದಿ, ಪಾರಾದೀಪ್‌ ಬಂದರಿನಲ್ಲಿ ಹೈಅಲರ್ಟ್‌

Sampriya
ಬುಧವಾರ, 14 ಮೇ 2025 (12:54 IST)
Photo Credit X
ಪಾರಾದೀಪ್‌ಗೆ ಬಂದಿದ್ದ ಹಡಗಿನಲ್ಲಿ 21 ಪಾಕಿಸ್ತಾನಿಗಳು ಪತ್ತೆಯಾದ ಬೆನ್ನಲ್ಲೇ  ಪಟ್ಟಣ ಪಾರಾದಿಪ್‌ನಲ್ಲಿ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ.

ಒಟ್ಟು 25 ಸಿಬ್ಬಂದಿಗಳೊಂದಿಗೆ ಬುಧವಾರ (ಮೇ 14, 2025) ದಕ್ಷಿಣ ಕೊರಿಯಾದಿಂದ ಸಿಂಗಾಪುರದ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಪಾರಾದೀಪ್ ಬಂದರನ್ನು ತಲುಪಿದೆ ಎಂದು ಅವರು ಹೇಳಿದರು.

ವಲಸೆ ಇಲಾಖೆಯಿಂದ ಸಿಬ್ಬಂದಿಯ ಬಗ್ಗೆ ಮಾಹಿತಿ ಪಡೆದ ನಂತರ ಒಡಿಶಾ ಮೆರೈನ್ ಪೋಲಿಸ್ ಮತ್ತು ಸಿಐಎಸ್‌ಎಫ್‌ನಿಂದ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ ಎಂದು ಮೆರೈನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಬಿತಾ ಡೆಹುರಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಪಾರಾದೀಪ್ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. "ಹಡಗನ್ನು ದಡದಿಂದ 20 ಕಿಮೀ ದೂರದಲ್ಲಿರುವ 'ಪಿಎಂ ಬರ್ತ್' ನಲ್ಲಿ ಲಂಗರು ಹಾಕಲಾಗಿದೆ ಮತ್ತು 11,350 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊಂದಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕಚ್ಚಾ ತೈಲವನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿಯನ್ನು ಹಡಗಿನಿಂದ ಹೊರಹೋಗಲು ಅನುಮತಿಸಲಾಗುವುದಿಲ್ಲ" ಎಂದು ಪೊಲೀಸ್ ಅಧಿಕಾರಿ ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivkumar: ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಡಿಸಿಎಂ ಡಿಕೆ ಶಿವಕುಮಾರ್‌ ಕೊಟ್ಟ ಸ್ಟ್ರಾಂಗ್ ಕಾರಣ ಹೀಗಿದೆ

ಅನುಮಾನಸ್ಪದವಾಗಿ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಮಲಮಗ ಪ್ರೀತಮ್ ಶವವಾಗಿ ಪತ್ತೆ

BR Gavai: ಮೊದಲ ಬೌದ್ಧ ಮುಖ್ಯ ನ್ಯಾಯಾಧೀಶರಾಗಿ ಬಿಆರ್‌ ಗವಾಯಿ ಪ್ರಮಾಣ ವಚನ ಸ್ವೀಕಾರ

Karnataka Weather: 15ರ ವರೆಗೆ ರಾಜ್ಯದ ಈ ಪ್ರದೇಶಗಲ್ಲಿ ಗುಡುಗು ಸಹಿತ ಭಾರೀ ಮಳೆ

ನಮಗೆ ತೊಂದರೆ ಕೊಟ್ಟವರನ್ನು ಬಿಡುವುದುಂಟೆ: ಪಾಕ್‌ಗೆ ಯೋಗಿ ಆದಿತ್ಯನಾಥ್‌ ಕೌಂಟರ್‌

ಮುಂದಿನ ಸುದ್ದಿ
Show comments