Select Your Language

Notifications

webdunia
webdunia
webdunia
webdunia

ಅಗ್ನಿ ಅವಗಢ: 20ಕ್ಕೂ ಹೆಚ್ಚು ಜನರ ಸಾವು, ಹಲವರಿಗೆ ಗಾಯ

ಅಗ್ನಿ ಅವಗಢ: 20ಕ್ಕೂ ಹೆಚ್ಚು ಜನರ ಸಾವು, ಹಲವರಿಗೆ ಗಾಯ
ತಿರುಚಿರಾಪಳ್ಳಿ , ಗುರುವಾರ, 1 ಡಿಸೆಂಬರ್ 2016 (16:30 IST)
ನಗರದಿಂದ 40 ಕಿ.ಮೀ ದೂರದಲ್ಲಿರುವ ಮುರುಗಾಪಟ್ಟಿಯಲ್ಲಿರುವ ಸ್ಫೋಟಕ ತಯಾರಿಕೆ ಘಟಕದಲ್ಲಿ ಅಗ್ನಿ ಅವಗಢ ಸಂಭವಿಸಿದ್ದು 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅಗ್ನಿ ಅವಗಢಕ್ಕೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. 10ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ವೇಗವಾಗಿ ಇತರೆಡೆ ಹರಡಿದಾಗ ಅದರ ಜ್ವಾಲೆಗಳನ್ನು ಕಂಡ ಜನ ಭಯಭೀತರಾಗಿ ಓಡಹೋಗಿದ್ದಾರೆ. ಇದರಿಂದಾಗಿ ಫ್ಯಾಕ್ಟರಿ ಇರುವ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
 
ನಗರದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ರಕ್ಷಣೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಒಂದು ವೇಳೆ ಮಳೆ ಬೀಳದಿದ್ದಲ್ಲಿ ಮತ್ತಷ್ಟು ಅನಾಹುತವಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಬೆಂಕಿ ಅವಗಢದಲ್ಲಿ ನೆಲಮಹಡಿ ಮತ್ತು ಮೊದಲನೇ ಮಹಡಿ ಸಂಪೂರ್ಣವಾಗಿ ನೆಲಸಮಗೊಂಡಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಜಿ.ಸತ್ಯನಾರಾಯಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‌ನಲ್ಲಿ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದವನಿಗೆ ಬಿತ್ತು ಗೂಸಾ