Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದವನಿಗೆ ಬಿತ್ತು ಗೂಸಾ

ಫೇಸ್‌ಬುಕ್‌ನಲ್ಲಿ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದವನಿಗೆ ಬಿತ್ತು ಗೂಸಾ
ದಾವಣಗೆರೆ , ಗುರುವಾರ, 1 ಡಿಸೆಂಬರ್ 2016 (15:11 IST)
ಫೇಸ್‌ಬುಕ್‌ನಲ್ಲಿ ಅಶ್ಲೀಲ ಮ್ಯಾಸೇಜ್‌ ಕಳುಹಿಸುತ್ತಿದ್ದವನಿಗೆ ಇಂದು ಮಹಿಳಾ ಸಂಘಟನೆಯ ಕಾರ್ಯಕರ್ತರು ಹಿಗ್ಗಾ ಮುಗ್ಗಾ ಗೂಸಾ ನೀಡಿ ತಕ್ಕ ಪಾಠ ಕಲಿಸಿದ್ದಾರೆ.
 
ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಮುಕ ಪವನ್, ಫೇಸ್‌ಬುಕ್‌ನಲ್ಲಿರುವ ಯುವತಿಯರಿಗೆ, ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
 
ಕೆಲ ತಿಂಗಳುಗಳಿಂದ ಯುವತಿಯರಿಗೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಆರಂಭದಲ್ಲಿ ಅವನ್ಯಾರೋ ತಲೆ ತಿರುಕ ಇರಬಹುದು ಎಂದು ಭಾವಿಸಿ ಸುಮ್ಮನಿದ್ದರು. ಆದರೆ, ಕಾಮುಕ ಪವನ್ ಕಾಟ ಅತಿರೇಕಕ್ಕೆ ಹೋದಾಗ ಮಹಿಳೆ ಸಂಘಟನೆಗೆ ಮಾಹಿತಿ ನೀಡಲಾಗಿದೆ.
 
ಇಂದು ಮಹಿಳಾ ಸಂಘಟನೆಯ ಕೈಗೆ ಸಿಕ್ಕ ಪವನ್‌ನನ್ನು ಮನಬಂದಂತೆ ಥಳಿಸಿದ ಮಹಿಳೆಯರು ಆಜಾದ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ಆಘಾತ: ಹೊಸ 500, 2000 ನೋಟುಗಳ ವರದಕ್ಷಿಣೆ ನೀಡದ್ದರಿಂದ ನವವಿವಾಹಿತೆ ಹತ್ಯೆ