ಮುಂಬೈ: ಇಂಜಕ್ಷನ್ ನೀಡುವಾಗ ಪ್ರಮಾದವೆಸಗಿ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ 2 ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
2 ವರ್ಷದ ಮಗು ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಕ್ಕವೇ 16 ವರ್ಷದ ಇನ್ನೊಬ್ಬ ರೋಗಿಯಿದ್ದರು. ವೈದ್ಯರು ಮನೆಗೆ ಹೋಗುವ ಮೊದಲು ನರ್ಸ್ ಗೆ ಇಬ್ಬರಿಗೂ ಇಂಜಕ್ಷನ್ ನೀಡಲು ಹೇಳಿ ಹೋಗಿದ್ದರು.
ಆದರೆ ನರ್ಸ್ ಇಂಜಕ್ಷನ್ ನೀಡುವಾಗ 16 ವರ್ಷದ ಮಗುವಿಗೆ ನೀಡಬೇಕಾದ ಔಷಧವನ್ನು 2 ವರ್ಷದ ಮಗುವಿಗೆ ನೀಡಿದ್ದಾರೆ. ಪರಿಣಾಮ ಕೆಲವೇ ನಿಮಿಷಗಳಲ್ಲಿ ಓವರ್ ಡೋಸ್ ಆಗಿ ಮಗು ಸಾವನ್ನಪ್ಪಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.