ಮೂವರು ಮಹಿಳೆಯರನ್ನು ಅಪಹರಿಸಿ ಅವರಲ್ಲಿ ಇಬ್ಬರ ಮೇಲೆ 12 ಜನರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ಆಗ್ರಾದ ಕಗರೋಲ್ ಪ್ರದೇಶದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದವರ ಬೇಟೆಗೆ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ನಮ್ಮನ್ನು ಕಾರ್‌ನಲ್ಲಿ ಎಳೆದು ಹಾಕಿಕೊಂಡು ಹೋಗಿ ಸಣ್ಣ ಗುಡಿಸಲಿನಲ್ಲಿ ಅತ್ಯಾಚಾರ ಮಾಡಿದರು. ಅವರು 10-12 ಜನರಿದ್ದರು. ನಡೆದ ಕೃತ್ಯದ ಕುರಿತು ಪೊಲೀಸರಿಗೆ ಹೇಳಿದರೆ ನಿಮ್ಮನ್ನು ಸಾಯಿಸುವುದಾಗಿ ಪೀಡಿತರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.