Webdunia - Bharat's app for daily news and videos

Install App

2 ಲಸಿಕೆ ಪಡೆದರೆ ಸೋಂಕು ತಗಲುವ ಸಾಧ್ಯತೆ ಅರ್ಧಕ್ಕರ್ಧ ಇಳಿಕೆ

Webdunia
ಶನಿವಾರ, 14 ಆಗಸ್ಟ್ 2021 (13:13 IST)
ನವದೆಹಲಿ(ಆ.14): ದೇಶದಲ್ಲಿ ಕೊರೋನಾ ಲಸಿಕೆ ಪಡೆದವರಿಗೆ ಸೋಂಕು ತಗಲುವ ಪ್ರಮಾಣ ಶೇ.0.05ಕ್ಕಿಂತ ಕಡಿಮೆಯಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ದೇಶದಲ್ಲಿ ಈವರೆಗೆ 53.14 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಈವರೆಗೆ 2.6 ಲಕ್ಷ ಜನರಿಗೆ, ಅಂದರೆ ಶೇ.0.048ರಷ್ಟುಜನರಿಗೆ ಮಾತ್ರ ಕೊರೋನಾ ಬಂದಿದೆ. ಇವರಲ್ಲಿ 1,71,511 ಜನರು ಒಂದು ಡೋಸ್ ಮಾತ್ರ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಲಸಿಕೆ ಪಡೆದ ನಂತರ ಸೋಂಕು ತಗಲಿದರೆ ಅಂತಹವರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳುವುದು ತುಂಬಾ ಕಡಿಮೆ, ಸಾವಿನ ಪ್ರಮಾಣವಂತೂ ಇನ್ನೂ ಕಡಿಮೆ ಎಂದು ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿತ್ತು. ಅದರ ಬೆನ್ನಲ್ಲೇ ಈಗ ಲಸಿಕೆ ಪಡೆದವರಿಗೆ ಸೋಂಕು ತಗಲುವ ಪ್ರಮಾಣ ಕೂಡ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತಿವೆ. ದೇಶದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಮೂರೂ ಲಸಿಕೆಗಳು ಸಮಾನವಾಗಿ ಕೊರೋನಾದಿಂದ ರಕ್ಷಣೆ ನೀಡುತ್ತಿವೆ ಎಂದು ಹೇಳಲಾಗಿದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ, ಎರಡೂ ಡೋಸ್ ಲಸಿಕೆ ಪಡೆದವರಿಗೆ ಕೊರೋನಾ ಸೋಂಕು ತಗಲುವ ಪ್ರಮಾಣ ಒಂದೇ ಡೋಸ್ ಲಸಿಕೆ ಪಡೆದವರಿಗೆ ತಗಲುವ ಪ್ರಮಾಣಕ್ಕಿಂತ ಶೇ.50ರಷ್ಟುಕಡಿಮೆ ಎಂಬ ವಿಷಯವೂ ಬೆಳಕಿಗೆ ಬಂದಿದೆ. ಇನ್ನು, ಲಸಿಕೆ ಪಡೆದ ನಂತರ ಸೋಂಕು ತಗಲಿದ ಶೇ.86ರಷ್ಟುಜನರಲ್ಲಿ ಡೆಲ್ಟಾರೂಪಾಂತರಿಯೇ ಕಂಡುಬಂದಿದೆ. ಹೀಗಾಗಿ ಲಸಿಕೆ ಪಡೆದ ನಂತರ ಸೋಂಕು ತಗಲಿದವರ ಮಾದರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಕೇರಳದಲ್ಲಿ ಅಪಾಯ ಹೆಚ್ಚು
ಲಸಿಕೆ ಪಡೆದವರಿಗೂ ಸೋಂಕು ತಗಲುವ ಪ್ರಮಾಣ ಕೇರಳದಲ್ಲಿ ಅತಿಹೆಚ್ಚಿದೆ. ಆ ರಾಜ್ಯದಲ್ಲಿ ಇಂತಹ ಸುಮಾರು 40,000ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಕೇಂದ್ರ ಸರ್ಕಾರವನ್ನು ಚಿಂತೆಗೀಡುಮಾಡಿದೆ. ಪಟ್ಟಣಂತಿಟ್ಟಜಿಲ್ಲೆಯೊಂದರಲ್ಲೇ ಲಸಿಕೆ ಪಡೆದವರ ಪೈಕಿ 20,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ದೇಶಕ್ಕೆ ಬಾರೀ ಭದ್ರತೆ

ಮಹಾರಾಷ್ಟ್ರ ಭೀಕರ ಅಪಘಾತ: ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 7ಮಂದಿ

ಎಐ ತಂತ್ರವಲ್ಲ, ಮೆಟ್ರೋ ಹಳದಿ ಮಾರ್ಗದಲ್ಲೂ ಕೇಳಿಬರುತ್ತಿದೆ ಅಪರ್ಣಾ ಧ್ವನಿ, ಹೇಗೆ ಗೊತ್ತಾ

ಕಾಂಗ್ರೆಸ್‌ನಲ್ಲಿ ಸತ್ಯವಂತರಿಗೆ ಕಾಲವಲ್ಲ: ಶೋಭಾ ಕರಂದ್ಲಾಜೆ

ಕೆಎನ್‌ ರಾಜಣ್ಣ ರಾಜೀನಾಮೆ: ಸಂಚಲನ ಸೃಷ್ಟಿಸುತ್ತಿದೆ ಡಿಕೆಶಿ ಆಪ್ತನ ಹೇಳಿಕೆ

ಮುಂದಿನ ಸುದ್ದಿ
Show comments