Select Your Language

Notifications

webdunia
webdunia
webdunia
webdunia

ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಸರಸಕ್ಕೆ ಕರೆದ ಕಾಮುಕ

ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಸರಸಕ್ಕೆ ಕರೆದ ಕಾಮುಕ
ಮುಂಬೈ , ಸೋಮವಾರ, 27 ಫೆಬ್ರವರಿ 2017 (10:17 IST)
ಪ್ರಯಾಣಿಕನೊಬ್ಬ ಇಬ್ಬರು ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಿಂದ ನಾಗ್ಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಭಾನುವಾರ ನಡೆದಿದೆ. ಸೀಟ್ ನಂಬರ್ 41ಇನಲ್ಲಿ ಕುಳಿತಿದ್ದ ಆಕಾಶ್ ಗುಪ್ತಾ ವಿರುದ್ಧ ಗಗನಸಖಿಯರು ಲಿಖಿತ ದೂರು ನೀಡಿದ್ದಾರೆ.


ಬಾಲಾಗಟ್`ನಲ್ಲಿ ಕ್ಯಾಪ್ಟನ್ ಮೋಹನ್ ಸಿಂಗ್, ಪಾನಮತ್ತ ಕಾಮುಕ ಆಕಾಶ್ ಗುಪ್ತಾನನ್ನ ಸಿಐಎಸ್ ಎಫ್ ಪಡೆಗೆ ಒಪ್ಪಿಸಿದ್ದಾರೆ. ಬಳಿಕ ಆಕಾಶ್ ಗುಪ್ತಾ ಸ್ಥಳೀಯ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಮಧನಕ್ಕೆ ಒಪ್ಪಿಸಲಾಗಿದೆ.

ಏನಿದು ಘಟನೆ..?: ಗೋವಾಗೆ ರಜೆ ಕಳೆಯಲು ತೆರಳಿದ್ದ ಗುಪ್ತಾ ನಾಗ್ಪುರಕ್ಕೆ ತೆರಳಲು ಮುಂಬೈನಲ್ಲಿ ವಿಮಾನ ಹತ್ತಿದ್ದ. ಪೊಲೀಸರ ಮಾಹಿತಿ ಪ್ರಕಾರ, ಪಾನಮತ್ತನಾಗಿದ್ದ ಗುಪ್ತಾ, ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಎಳೆದಾಡಿದ್ದಾನೆ. ಕೂಡಲೇ ವಿಮಾನ ಸಿಬ್ಬಂದಿ ಅವರನ್ನ ಕಾಪಾಡಿದ್ದಾರೆ. ಸಿಬ್ಬಂದಿ ಜೊತೆಯೂ ಗುಪ್ತಾ ವಾಗ್ವಾದ ನಡೆಸಿದ್ದಾನೆ. ಬಳಿಕ ಗಗನಸಖಿಯರು ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಢೂತಿ ದೇಹದ ಪೊಲೀಸಪ್ಪನಿಗೆ ತೂಕ ಇಳಿಸುವ ಆಸೆ