Select Your Language

Notifications

webdunia
webdunia
webdunia
webdunia

ದಢೂತಿ ದೇಹದ ಪೊಲೀಸಪ್ಪನಿಗೆ ತೂಕ ಇಳಿಸುವ ಆಸೆ

ದಢೂತಿ ದೇಹದ ಪೊಲೀಸಪ್ಪನಿಗೆ ತೂಕ ಇಳಿಸುವ ಆಸೆ
Mumbai , ಸೋಮವಾರ, 27 ಫೆಬ್ರವರಿ 2017 (10:03 IST)
ಮುಂಬೈ: ಮೊನ್ನಯಷ್ಟೇ ಖ್ಯಾತ ಅಂಕಣಕಾರ್ತಿ ಶೋಭಾ ಡೇ ತಮಾಷೆ ಮಾಡಿದ್ದ ದಡೂತಿ ದೇಹದ ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್  ಇದೀಗ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ.


ದಡೂತಿ ದೇಹದ ಪೊಲೀಸ್ ಅಧಿಕಾರಿ ಡೌಲಟ್ರಾಂ ಜೊಗಾವಟ್ ಎಂಬವರ ಫೋಟೋ ಪ್ರಕಟಿಸಿ ಶೋಭಾ ಡೇ ನೋಡಿ ಮುಂಬೈಯಲ್ಲಿ ಭಾರೀ ಪೊಲೀಸ್ ಬಂದೋ ಬಸ್ತ್ ಇದೆ ಎಂದು ತಮಾಷೆ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರಿಂದ ಎಚ್ಚರಿಕೆಯನ್ನೂ ಪಡೆದಿದ್ದರು. ಅದೇ ಅಧಿಕಾರಿ ಈ ಘಟನೆಯ ನಂತರ ಎಚ್ಚೆತ್ತುಕೊಂಡಿದ್ದಾರೆ.

ತಮ್ಮ ದೇಹ ತೂಕ ಇಳಿಸಲು ಯಾವುದಾದರೂ ಚಿಕಿತ್ಸೆಯಿದೆಯೇ ಎಂದು ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಮುಂಬೈಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು, ನಂತರವಾದರೂ, ತನ್ನ ದೇಹ ತೂಕ ಸುಧಾರಿಸೀತು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ