Webdunia - Bharat's app for daily news and videos

Install App

17 ವರ್ಷ ಹಿಂದಿನ ಕೊಲೆ ಗುಟ್ಟು ರಟ್ಟಾಯ್ತ!?

Webdunia
ಮಂಗಳವಾರ, 28 ಡಿಸೆಂಬರ್ 2021 (14:28 IST)
ತಿರುವನಂತಪುರಂ : 17 ವರ್ಷಗಳ ಹಿಂದೆ ಡಬಲ್ ಮರ್ಡರ್ ಮಾಡಿರುವುದಾಗಿ ತನ್ನ ಸಹ ಕೈದಿಗಳೊಂದಿಗೆ ಗುಟ್ಟನ್ನು ಬಿಚ್ಚಿಟ್ಟ ನಂತರ ಆರೋಪಿಯನ್ನು ಬಂಧಿಸಲಾಗಿದೆ.’

ಜಯಾನಂದನ್(53) ಸಿಕ್ಕಿಬಿದ್ದಿರುವ ಕೈದಿ ತಿರುವನಂತಪುರಂ ಕೇಂದ್ರ ಕಾರಾಗ್ರಹದಲ್ಲಿ ಇತರ ಕೈದಿಗಳೊಡನೆ ಮಾತನಾಡುತ್ತಿದ್ದಾಗ ತಾನು ಮಾಡಿರುವ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ. 8 ಕೊಲೆ ಆರೋಪಗಳನ್ನು ಎದುರಿಸುತ್ತಿದ್ದ ಜಯಾನಂದನ್ನನ್ನು ತಿರುವನಂತಪುರಂ ಜೈಲಿನಲ್ಲಿ ಇರಿಸಲಾಗಿತ್ತು.

ಆತನ ಜೊತೆಗಿದ್ದ ಇಬ್ಬರು ಸಹ ಕೈದಿಗಳೊಡನೆ ರಹಸ್ಯವನ್ನು ಬಿಚ್ಚಿಟ್ಟಿದ್ದು, ಈ ಮೂಲಕ ಸಿಕ್ಕಿ ಬಿದ್ದಿದ್ದಾನೆ. 2004ರ ಮೇ 30 ರಂದು ಜಯಾನಂದನ್ ಜೋಡಿ ಕೊಲೆ ಮಾಡಿದ್ದ.

ನಾನಿಕುಟ್ಟಿಯಮ್ಮಾಳ್(74) ಮತ್ತು ಆಕೆಯ ಸಹೋದರಿಯ ಮಗ ನಾರಾಯಣ ಅಯ್ಯರ್(60) ಎಂಬವರ ಕೊಲೆಗೈದು, 350 ಗ್ರಾಂ ಚಿನ್ನ ಹಾಗೂ 15 ಗ್ರಾಂ ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದ.

ಇದೀಗ ಘಟನೆಯನ್ನು ಜಯಾನಂದನ್ ಸಹಕೈದಿಗಳೊಡನೆ ಬಾಯಿಬಿಟ್ಟಿದ್ದರಿಂದ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಅಪರಾಧದ ವಿಭಾಗದಲ್ಲಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments