Select Your Language

Notifications

webdunia
webdunia
webdunia
webdunia

ಪಬ್ ಜಿನಲ್ಲಿ ಸೋತಿದ್ದಕ್ಕೆ ಗೆಳಯರಿಂದ ಅಪಹಾಸ್ಯ: ಬಾಲಕ ಆತ್ಮಹತ್ಯೆ

ಪಬ್ ಜಿನಲ್ಲಿ ಸೋತಿದ್ದಕ್ಕೆ ಗೆಳಯರಿಂದ ಅಪಹಾಸ್ಯ: ಬಾಲಕ ಆತ್ಮಹತ್ಯೆ
bengaluru , ಸೋಮವಾರ, 13 ಜೂನ್ 2022 (15:48 IST)

ಪಬ್ ಜಿ ಆಟದಲ್ಲಿ ಸೋತಿದ್ದಕ್ಕೆ ಗೆಳೆಯರು ಮಾಡಿದ ಅಪಹಾಸ್ಯದಿಂದ ಬೇಸತ್ತು 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿ ನಡೆದಿದೆ.

ಹಾಸ್ಟೇಲ್ ನಲ್ಲಿ ಓದುತ್ತಿದ್ದ ಬಾಲಕ ಬೇಸಿಗೆ ರಜೆಯನ್ನು ತಂದೆ ಹಾಗೂ ಕುಟುಂಬದವರ ಜೊತೆ ಕಳೆಯಲು ಊರಿಗೆ ಬಂದಿದ್ದ. ಈ ವೇಳೆ ಪಬ್ ಜಿ ಆಟದಲ್ಲಿ ಸೋತಿದ್ದಕ್ಕೆ ಗೆಳೆಯರು ಅಪಹಾಸ್ಯ ಮಾಡಿದ್ದರು ಎಂದು ತಿಳಿದು ಬಂದಿದೆ.

ಪತ್ನಿಯಿಂದ ದೂರವಾಗಿದ್ದ ತಂದೆಯ ಜೊತೆ ಮಗು ವಾಸವಾಗಿದ್ದ. ಈ ಹಿನ್ನೆಲೆಯಲ್ಲಿ ಮಗುವಿನ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದಂಡ ವಿಧಿಸಿದ ಸಿಟ್ಟಿಗೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡಿದ ಲೈನ್ ಮ್ಯಾನ್!