Select Your Language

Notifications

webdunia
webdunia
webdunia
webdunia

12ನೇ ತರಗತಿ ಪರೀಕ್ಷೆ ಬರೆದ 11ರ ಬಾಲಕ

12ನೇ ತರಗತಿ ಪರೀಕ್ಷೆ ಬರೆದ 11ರ ಬಾಲಕ
ಹೈದರಾಬಾದ್ , ಶುಕ್ರವಾರ, 3 ಮಾರ್ಚ್ 2017 (10:04 IST)
ಈತ ಮಹಾ ಜೀನಿಯಸ್. ಹೈದರಾಬಾದ್ ನಿವಾಸಿಯಾದ ಈ ಬಾಲಕನ ಹೆಸರು ಅಗಸ್ತ್ಯ ಜೈಸ್ವಾಲ್. 11ರ ಪ್ರಾಯದಲ್ಲೇ ಈತ 12ನೇ ತರಗತಿ ಪರೀಕ್ಷೆಯನ್ನು ಎದುರಿಸಿದ್ದಾನೆ.

ಸೈಂಟ್ ಮೇರಿ ಜೂನಿಯರ್ ಕಾಲೇಜು ಯುಸುಫ್‌ಗುಡಾದ ವಿದ್ಯಾರ್ಥಿಯಾದ ಈತ ತನ್ನ ಅಸಾಧಾರಣ ಬುದ್ಧಿಮತ್ತೆಯಿಂದ ಎಲ್ಲರ ಹುಬ್ಬೇರಿಸಿದ್ದಾನೆ. ದ್ವಿತೀಯ ಪಿಯುಸಿಗೆ ಈತ ಆಯ್ದುಕೊಂಡ ವಿಷಯಗಳು - ಸಿವಿಕ್ಸ್, ಅರ್ಥಶಾಸ್ತ್ರ ಮತ್ತು ವಾಣಿಜ್ಯ. 
 
ಚೈತನ್ಯ ಜೂನಿಯರ್ ಕಲಾಶಾಲಾ, ಜುಬ್ಲಿ ಹಿಲ್ಸ್, ಹೈದರಾಬಾದಿನಲ್ಲಾತ ಪರೀಕ್ಷೆಯನ್ನು ಬರೆದಿದ್ದಾನೆ.
 
ಈ ಕುರಿತು ಪ್ರತಿಕ್ರಿಯಿಸುವ ಆತನ ಪೋಷಕರು, ಹೌದು ನಮ್ಮ ಮಗ ದೇವರ ವಿಶಿಷ್ಟ ಉಡುಗೊರೆ. ಆದರೆ ನಮ್ಮ ಕುಟುಂಬದಲ್ಲಿ ಈತನೊಬ್ಬನೇ ಜೀನಿಯಸ್ ಅಲ್ಲ. ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿರುವ ಈತನ ಅಕ್ಕ  ನೈನಾ ಜೈಶ್ವಾಲ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಪಿ.ಹೆಚ್‌ಡಿ ಪದವಿಯನ್ನು ಪಡೆಯಲಿದ್ದಾಳೆ, ಎಂದು ಹೆಮ್ಮೆಯಿಂದ ಹೇಳುತ್ತಾರೆ.
 
ವರದಿಗಳ ಪ್ರಕಾರ ನೈನಾ, ತನ್ನ 15ನೇ ವಯಸ್ಸಿನಲ್ಲಿಯೇ ನೈನಾ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಳು. 
 

Share this Story:

Follow Webdunia kannada

ಮುಂದಿನ ಸುದ್ದಿ

ಓಎಲ್ಎಕ್ಸ್`ನಲ್ಲಿ ಹಸು, ಎಮ್ಮೆಗಳ ವ್ಯಾಪಾರ ಮಾಡುತ್ತಿರುವ ರೈತ