Select Your Language

Notifications

webdunia
webdunia
webdunia
webdunia

ಓಎಲ್ಎಕ್ಸ್`ನಲ್ಲಿ ಹಸು, ಎಮ್ಮೆಗಳ ವ್ಯಾಪಾರ ಮಾಡುತ್ತಿರುವ ರೈತ

ಓಎಲ್ಎಕ್ಸ್`ನಲ್ಲಿ ಹಸು, ಎಮ್ಮೆಗಳ ವ್ಯಾಪಾರ ಮಾಡುತ್ತಿರುವ ರೈತ
Haryana , ಶುಕ್ರವಾರ, 3 ಮಾರ್ಚ್ 2017 (09:56 IST)
ಓಎಲ್ಎಕ್ಸ್ ಎಂದರೆ ಟಿವಿ, ಫ್ರಿಡ್ಜ್, ಮೊಬೈಲ್, ವಾಹನಗಳು ಸೇರಿದಂತೆ ದಿನಬಳಕೆ ವಸ್ತುಗಳ ಕೊಂಡು ಮಾರುವ ವ್ಯವಹಾರ ನಡೆಯುವುದನ್ನಷ್ಟೇ ನೀವು ನೋಡಿರುತ್ತಿರಿ. ಆದರೆ, ಇಲ್ಲೊಬ್ಬ ರೈತ ಓಎಲ್`ಎಕ್ಸ್`ನಲ್ಲೇ ದನದ ವ್ಯಾಪಾರ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ, ಆತನ ವ್ಯವಹಾರದಲ್ಲಿ ಯಶಸ್ಸು ಕೂಡ ಕಂಡಿದ್ದಾನೆ.


ಹರ್ಯಾಣದ ಸೋನಿಪತ್`ನ ರೈತ ರಾಕೇಶ್ ಎಂಬಾತ ಈ ರೀತಿ ಹೈಟೆಕ್ ವ್ಯವಹಾರದ ಮೂಲಕ ಸುದ್ದಿ ಮಾಡಿದ್ದಾರೆ. ಇದುವರೆಗೆ 25ಕ್ಕೂ ಅಧಿಕ ಹಸು ಮತ್ತು ಎಮ್ಮೆಗಳನ್ನ ರೈತರಿಗೆ ಮಾರಿದ್ದೇನೆ ಎನ್ನುವ ರಾಕೇಶ್ ಇದರಿಂದ ಲಕ್ಷ ಲಕ್ಷ ಲಾಭ ಮಾಡಿದ್ದಾರೆ.  ಪಿಯುಸಿ ಒದಿರುವ ರಾಕೇಶ್ ಕಳೆದ 4 ತಿಂಗಳಿಂದ ಈ ವ್ಯವಹಾರ ಮಾಡುತ್ತಿದ್ದಾರೆ.

ಓಎಲ್ಎಕ್ಸ್`ನಲ್ಲಿ ಹಸುಗಳ ಪೋಟೋ ನೋಡುವ ಗ್ರಾಹಕರು ಬಳಿಕ ಸ್ಥಳಕ್ಕೆ ಭೇಟಿ ನೀಡಿ ಬೆಲೆ ಮತ್ತು ಹಸುಗಳ ಜಾತಿ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಳಿಕ ವ್ಯಾಪಾರ ಕುದುರಿಸುತ್ತಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಎಸ್ಎಸ್ ಕಚೇರಿ ಬಳಿ ಸ್ಪೋಟ: ನಾಲ್ಕು ಮಂದಿಗೆ ಗಾಯ